
ಶಿವಮೊಗ್ಗ :- ಪ್ರಯಾಗ್‌ರಾಜ್‌ನ ಕುಂಬಮೇಳದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪೆ. 22ರಂದು ಶಿವಮೊಗ್ಗದಿಂದ ವಿಶೇಷ ರೈಲ್ ನ್ನು ಬಿಡಲಾಗುತ್ತಿದೆ.
ಸಾರ್ವಜನಿಕರ ಕೋರಿಕೆ ಮೇರೆಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲನ್ನು ಬಿಡಲು ಒಪ್ಪಿಗೆ ನೀಡಲಾಗಿದೆ. ( ಈ ರೈಲು ವಾರಣಾಸಿ ತನಕ ಹೋಗುವುದು.)
ಕುಂಬಮೇಳಕ್ಕೆ ತೆರಳುವವರು ವಾರಣಸಿಯಿಂದ ಪ್ರಯಾಗ್‌ರಾಜ್‌ಗೆ ಹೋಗ ಇದರಿಂದ ಅನುಕೂಲವಾಗಲಿದೆ. ಪೆ. 22ರ ಸಂಜೆ 4.30ಕ್ಕೆ ಹೊರಡುವ ಈ ರೈಲು ಪೆ. 24ರ ಮಧ್ಯಾಹ್ನ 3 ಗಂಟೆಗೆ ಪ್ರಯಾಗ್‌ರಾಜ್ ಚೌಕಿಗೆ ತಲುಪುವುದು.
ಈ ರೈಲು ಪೆ. 25ರ ಗುರುವಾರ ಮುಂಜಾನೆ 1.30ಕ್ಕೆ ವಾರಣಾಸಿಯಿಂದ ಈ ರೈಲು ವಾಪಾಸ್ಸಾಗಲಿದೆ. ಈ ರೈಲು ಪ್ರಯಾಗ್‌ರಾಜ್ ಚೌಕಿಗೆ ಪೆ. 25ರ ಮುಂಜಾನೆ 5.40ಕ್ಕೆ ಆಗಮಿಸುವುದು ಹಾಗೂ ಅದೇ ದಿನ ಮುಂಜಾನೆ 5.45ಕ್ಕೆ ಪ್ರಯಾಗ್‌ರಾಜ್ ಬಿಡುವುದು. ಪೆ. 27ರ ಮುಂಜಾನೆ 6.45ಕ್ಕೆ ಶಿವಮೊಗ್ಗ ತಲುಪುವುದು.
ಕುಂಬಮೇಳಕ್ಕೆ ತೆರಳಲು ಉತ್ಸುಕರಾಗಿರುವ ಜಿಲ್ಲೆಯ ಜನತೆ ಈ ವಿಶೇಷ ರೈಲಿನ ಸದ್ಭಳಕೆ ಮಾಡಿಕೊಳ್ಳುವಂತೆ ಸಂಸದ ಬಿ.ವೈ. ರಾಘವೇಂದ್ರ ಕೋರಿದ್ದಾರೆ. ಬಹುತೇಕ ಇಂದಿನಿಂದಲೇ ಈ ವಿಶೇಷ ರೈಲಿನ ಪ್ರಯಾಣಕ್ಕೆ ಸೀಟುಗಳ ಬುಕ್ಕಿಂಗ್ ಆರಂಭವಾಗುತ್ತಿದೆ.
