
ಶಿವಮೊಗ್ಗ :- ವೀರ ಮರಣವನ್ನಪ್ಪಿದ ಯೋಧ ಹೊಸನಗರದ ಮಂಜುನಾಥ್ ಗೆ ಶಿವಮೊಗ್ಗ ನಗರದ ನಾಗರಿಕರಿಂದ ಬೆಕ್ಕಿನ ಕಲ್ಮಟ್ಟದ ಬಳಿಯಿಂದ ಬಸ್ ನಿಲ್ದಾಣದವರೆಗೆ ಯೋಧನ ಮೃತ ದೇಹಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ವಿದಾಯ ಹೇಳಲಾಯಿತು.
ಶಾಸಕ ಚನ್ನಬಸಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವರು ಮೃತ ಯೋಧನ ಪತ್ನಿಗೆ ಸಾಂತ್ವನ ಹೇಳಿದರು.
ನಂತರ ಸೈನಿಕನ ಮೃತ ದೇಹ ಹೊಸನಗರದ ಮಾವಿನಕೊಪ್ಪ ಸರ್ಕಲ್ ತಲುಪಲಿದೆ. ಹೊಸನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಮೃತ ಮಂಜುನಾಥ್ ಅವರ ಹುಟ್ಟೂರು ಸಂಕೂರಿಗೆ ತಲುಪಲಿದೆ. ಅಲ್ಲಿ ಬೆಳಗಾವಿಯ ವಾಯುಸೇನಾ ಅಧಿಕಾರಿಗಳು ಸೇನಾ ಗೌರವ ಸಲ್ಲಿಸುವರು.
ನಂತರ ತಾಲೂಕು ಆಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುವುದು. ಈ ಪ್ರಕ್ರಿಯೆಗಳ ನಂತರ ಸೈನಿಕ ಮಂಜುನಾಥ್ ಅವರ ಶರೀರವನ್ನು ಸುಮಾರು ಮಧ್ಯಾಹ್ನ 2ಗಂಟೆಯ ಹೊತ್ತಿಗೆ ಕುಟುಂಬದವರಿಗೆ ಹಸ್ತಾಂತರಿಸ ಲಾಗುವುದು ಎಂದು ಮಾಹಿತಿ ತಿಳಿದುಬಂದಿದೆ.
