google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಮಹಾನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತ ಹಾಗೂ ರೆವಿನ್ಯೂ ಜಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನಗಳ ಸ್ವತ್ತುಗಳಿಗೆ ಇ-ಆಸ್ತಿ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಇ-ಆಸ್ತಿ ಅಭಿಯಾನ ಕುರಿತು ಚರ್ಚಿಸಲು ಮಹಾನಗರಪಾಲಿಕೆ, ಡಿಯುಡಿಸಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಕರ್ನಾಟಕ ಮಹಾನಗರಪಾಲಿಕೆ ತೆರಿಗೆ ನಿಯಮ 2025 ನ್ನು ಜಾರಿಗೆ ತಂದಿದ್ದು ಇದರಂತೆ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎ-ಖಾತಾ ಮತ್ತು ಬಿ-ಖಾತೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 10-09-2024 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಲಿದ್ದು ಇಂತಹ ಪ್ರಕರಣಗಳ ವ್ಯಾಪ್ರಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪ.ಪಂ. ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಗಳನ್ನು ಪಡೆಯಬಹುದು. ಇಖಾ॒ತೆ ಮಾಡಿಸುವಲ್ಲಿ ಇಸಿ ಪಡೆಯಲು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಇಸಿ ಗೆ ಅರ್ಜಿ ಸಲ್ಲಿಸಿದ 3 ದಿನಗಳ ಒಳಗೆ ಹಾಗೂ ಗರಿಷ್ಟ 1 ವಾರದೊಳಗೆ ಇಸಿ ನೀಡಬೇಕು. ಹಾಗೂ ಆಸ್ತಿ ಮಾಲೀಕರ ವ್ಯವಹಾರದ ನಂತರದ ಒಂದು ವರ್ಷದ ಇಸಿ ಹಾಗೂ ಆನ್‌ಲೈನ್ ಇಸಿ ಯನ್ನು ಪರಿಗಣಿಸುವಂತೆ ತಿಳಿಸಿದರು.

ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದೇ, ಇಸಿ ಪಡೆಯಲು ಸಮರ್ಪಕವಾಗಿ ಮಾಹಿತಿಯನ್ನು ಮಾಲೀಕರಿಗೆ ನೀಡಬೇಕು. ಈ ವಿಷಯದಲ್ಲಿ ಯಾವುದೇ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಿ, ಇ-ಖಾತಾ ಅಭಿಯಾನವನ್ನು ಸಕ್ರಿಯವಾಗಿ ಕೈಗೊಳ್ಳಬೇಕು. ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡು ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ಎ-ಖಾತೆ, ಬಿ-ಖಾತೆ ಪಡೆಯುವ ಕುರಿತು ಜನದಟ್ಟಣೆ ಇರುವೆಡೆ ಫ್ಲೆಕ್ಸ್, ಹೋರ್ಡಿಂಗ್ಸ್, ಕಸದ ವಾಹನದಲ್ಲಿ ಜಿಂಗಲ್ಸ್, ಆಟೋ ಪ್ರಚಾರ, ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಹಾಗೂ ಹೆಲ್ಪ್ ಲೈನ್ ಮೂಲಕ ಇ-ಖಾತೆ ಪಡೆಯಲು ಮಾಲೀಕರಿಗೆ ಸಹಕರಿಸಬೇಕು ಎಂದರು.

ಡಿಯುಡಿಸಿ ಯೋಜನಾ ನಿರ್ದೇಶಕ ಕೆ.ರಂಗಸ್ವಾಮಿ ಮಾತನಾಡಿ, ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 263808ಆಸ್ತಿಗಳಿದ್ದು, ಇದರಲ್ಲಿ 439471 ಅನಧಿಕೃತ ಆಸ್ತಿಗಳು ಡಿಸಿಬಿನಲ್ಲಿ ನಮೂದಾಗಿದ್ದು ಇ-ಆಸ್ತಿ ತಂತ್ರಾಂಶದ ಮೂಲಕ ಒಟ್ಟು ಅನುಮೋದಿತ ಆಸ್ತಿಗಳು 50,599 ಅಧಿಕೃತ, 1773 ಅನಧಿಕೃತ, 7 ಅಕ್ರಮ ಸೇರಿದಂತೆ 52,379 ಇವೆ. ಕಳೆದ ಫೆ. 19 ರಿಂದ ಮಾ. 3 ರವರೆಗೆ 1113 ಅಧಿಕೃತ, 22 ಅನಧಿಕೃತ ಆಸ್ತಿಗಳ ಇ-ಆಸ್ತಿ ತಂತ್ರಾಂಶದಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಪಾಲಿಕೆ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *