google.com, pub-9939191130407836, DIRECT, f08c47fec0942fa0

ಶಿವಮೊಗ್ಗ:- ಜಿಲ್ಲೆಯ ಶೇ.50ಕ್ಕೂ ಹೆಚ್ಚು ಮಳೆ ಮಾಪನ ಯಂತ್ರಗಳು ಕೆಟ್ಟು ಹೋಗಿದ್ದರೂ ದುರಸ್ಥಿ ಮಾಡಿಸಲು ವಿಳಂಬ ಮಾಡಲಾಗುತ್ತಿದೆ. ಇದರಿಂದ ಅತಿವೃಷ್ಠಿ ಹಾಗೂ ಅನಾವೃಷ್ಠಿ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಜಿಲ್ಲೆಯ ರೈತರಿಗೆ ವಿಮಾ ಯೋಜನೆಯಡಿ ಸರಿಯಾಗಿ ಪರಿಹಾರ ಸಿಗುತ್ತಿಲ್ಲ.

ಈ ಕುರಿತು ಗಂಭೀರ ಚರ್ಚೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

ಜಿಲ್ಲೆಯಲ್ಲಿ 280 ಮಳೆ ಮಾಪನ ಕೇಂದ್ರಗಳಿವೆ. ಈ ಪೈಕಿ 66 ಕೇಂದ್ರಗಳ ನಿರ್ವಹಣೆ ಇಲ್ಲವಾಗಿದೆ, 165 ಮಾಪನಗಳು ಕೆಲಸವೇ ಮಾಡುತ್ತಿಲ್ಲ. ತೀರ್ಥಹಳ್ಳಿಯ ಮಾಪನವೊಂದರ ಮೇಲೆ ಶೀಟ್ ಹಾಕಿ ಮಳೆಯೇ ಬೀಳದಂತೆ ಮಾಡಲಾಗಿದೆ ಎಂಬ ಮಾಹಿತಿ ನಿರ್ವಹಣೆಯ ಜವಬ್ದಾರಿ ಹೊತ್ತ ಕಂದಾಯ ಇಲಾಖೆ ಅದಿಕಾರಿಗಳಿಂದಲೇ ಬಂತು.

ಈ ವಿಷಯ ಕೇಳಿ ಆತಂಕ ವ್ಯಕ್ತಪಡಿಸಿದ ಮಾಜಿ ಸಚಿವ ಆರಗ eನೇಂದ್ರ, ಇಂದಿನ ಆಧುನಿಕ ತಂತ್ರeನದಲ್ಲಿ ಮಳೆ ಮಾಪನ ಯಂತ್ರಗಳ ರಿಪೇರಿ ಮಾಡಲು ಇಷ್ಟು ವಿಳಂಬವೇ, ಇದರಿಂದ ಮಳೆ ಬಿದ್ದ ಬಗ್ಗೆ ಕರಾರುವಕ್ಕಾದ ಅಂಕಿ ಅಂಶ ಸಿಗದೆ ಬೆಳೆ ವಿಮೆ ಪಡೆಯಬೇಕಾದ ರೈತರಿಗೆ ಅನ್ಯಾಯವಾಗುವುದು ಎಂದರು.

ಬೆಳೆ ವಿಮೆ ಪರಿಹಾರ ತಪ್ಪಿಸಲು ವಿಮಾ ಕಂಪನಿಗಳು ಈ ಮಳೆ ಮಾಪನ ಯಂತ್ರಗಳ ದುರಸ್ಥಿ ಮಾಡದಂತೆ ಪ್ರಭಾವ ಬೀರಿರಬಹುದೇ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಸಂಶಯ ವ್ಯಕ್ತಪಡಿಸಿದರು.

ಸುದೀರ್ಘ ಚರ್ಚೆ ನಂತರ ಸಚಿವ ಮಧು ಬಂಗಾರಪ್ಪ ಅವರು, ಈ ಕುರಿತು ಸರ್ಕಾರ ಮಟ್ಟದಲ್ಲಿ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳ ಮಾಹಿತಿ ಪಡೆದು ಮಳೆ ಮಾಪನಗಳ ದುರಸ್ಥಿ ಹಾಗೂ ಇದರ ಹಿಂದೆ ವಿಮಾ ಕಂಪನಿಗಳ ಪ್ರಭಾವ ಇದೆ ಎಂದು ತಿಳಿದುಕೊಳ್ಳುವ ಭರವಸೆ ನೀಡಿದರು.

ಸಭೆಯ ಆರಂಭದಲ್ಲಿ ಅನುಸರಣ ವರದಿ ಭಾಗವಾಗಿ ಅದಿಕಾರಿಗಳು, ಮಳೆ ಹಾನಿಗೆ 2024ರಲ್ಲಿ 136 ಅನದಿಕೃತ ಮನೆ ಸೇರಿದಂತೆ ಒಟ್ಟು 1208 ಮನೆಗಳಿಗೆ ಪರಿಹಾರ ನೀಡಲಾಗಿದೆ. 2023ರಲ್ಲಿ 275 ಮನೆಗಳಿಗೆ ಪರಿಹಾರ ನೀಡಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

2023ರಲ್ಲಿ ಮಳೆಯಿಂದ ಮನೆಗಳಿಗೆ ಸರಿಯಾಗಿ ಪರಿಹಾರ ದೊರೆತಿಲ್ಲ ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಅನದಿಕೃತ ಮನೆಗಳಿಗೆ ಪರಿಹಾರ ನೀಡುವಲ್ಲಿ ವರ್ಷಕ್ಕೊಂದು ನೀತಿ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಅನ್ಯಾಯವಾಗಿದೆ. ಆದ್ದರಿಂದ 2023ರಲ್ಲಿ ಮಳೆಯಿಂದ ಹಾನಿಯಾದ ಅನದಿಕೃತ ಮನೆಗಳಿಗೂ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಂಸದ ಬಿ.ವೈ. ರಾಘವೇಂದ್ರ, ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಾವೇರಿ, ಜಿಲ್ಲಾದಿಕಾರಿ ಡಾ. ಗುರುದತ್ ಉಪಸ್ಥಿತರಿದ್ದರು.
ಎರಡು ಗಂಟೆ ವಿಳಂಬವಾಗಿ ಆರಂಭವಾದ ಸಭೆ ಮಧ್ಯಾಹ್ನದ ನಂತರವೂ ಮುಂದುವರೆದಿತ್ತು.

ಸರ್ಜಿ ಚಿಕಿತ್ಸೆ:

ಇಂದಿನ ಕೆಡಿಪಿ ಸಭೆಯ ವೇದಿಕೆಯಲ್ಲಿ ಕುಳಿತಿದ್ದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಾವೇರಿಯವರು ಸಭೆಯ ನಡುವೆ ಏಕಾಎಕಿ ಸುಸ್ತಾದಂತೆ ತಮ್ಮ ಮುಂಭಾಗಕ್ಕೆ ಕುಸಿದರು.

ಎದುರಿನಲ್ಲೇ ಇದ್ದ ವಿಧಾನ ಪರಿಷತ್ ಸದಸ್ಯ, ವೈದ್ಯರಾದ ಡಾ. ಧನಂಜಯ ಸರ್ಜಿ ಅವರು ಕಾವೇರಿಯವರ ಬಳಿ ಧಾವಿಸಿ ಅವರ ಆರೈಕೆ ಮಾಡಿದರು. ತಕ್ಷಣ ಪಕ್ಕದ ಕೊಠಡಿಗೆ ಅವರನ್ನು ಕರೆದೊಯ್ದು ತುರ್ತು ಚಿಕಿತ್ಸೆ ನೀಡಿದರು. ಹತ್ತು ನಿಮಿಷದಲ್ಲೇ ಕಾವೇರಿಯವರು ಆರಾಮಾಗಿದ್ದಾರೆ ಎಂದು ಡಾ. ಸರ್ಜಿ ಸಭೆಗೆ ಬಂದು ಹೇಳಿದರು.

ಸಭೆಯಲ್ಲಿದ್ದವರೆಲ್ಲ ಡಾ. ಸರ್ಜಿಯವರ ಸೇವಾ ಮನೋಭಾವಕ್ಕೆ ಪ್ರಶಂಶಿಸಿ ಅಭಿನಂದಿಸಿದರು.

Leave a Reply

Your email address will not be published. Required fields are marked *