
ಶಿವಮೊಗ್ಗ :- ಇಲ್ಲಿಯ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಬೊಮ್ಮನಕಟ್ಟೆಯಲ್ಲಿ ಹಾಡಹಗಲೇ ರೌಡಿ ಶೀಟರ್ ರಾಜೇಶ್ ಶೆಟ್ಟಿಯ ಬರ್ಬರ ಕೊಲೆ ನಡೆದ ಘಟನೆ ನಡೆದಿದೆ.
ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘು ಶೆಟ್ಟಿ ಎಂಬಾತನ ಮರ್ಡರ್ ಕೇಸಲ್ಲಿದ್ದ ಎನ್ನಲಾಗಿದೆ.
ಇತ್ತೀಚೆಗಷ್ಟೇ ತನ್ನ ವಿರೋಧಿ ಬೊಮ್ಮನಕಟ್ಟೆಯ ಕರಿಯ ವಿನಯ್ ಮೇಲೆ ಹಲ್ಲೆ ಮಾಡಿ ಅವನ ಕೈ ಬೆರಳುಗಳನ್ನು ಕತ್ತರಿಸುವಂತೆ ಹಲ್ಲೆ ಮಾಡಿದ್ದ ಎಂಉ ತಿಳಿದು ಬಂದಿದೆ.
ಈ ದ್ವೇಷದಿಂದಾಗಿ ಕರಿಯ ವಿನಯ್ ತಂಡ ರಾಜೇಶ್ ಶೆಟ್ಟಿ ಮೇಲೆ ಮುಗಿಬಿದ್ದು ಕೊಲೆ ಮಾಡಿದ ಎಂಬ ಸಂಕೆ ವ್ಯಕ್ತವಾಗುತ್ತಿದೆ.
ಪ್ರಕರಣ ಇಂದು ಮಧ್ಯಾಹ್ನ ನಡೆದಿದ್ದು, ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.