
ಸಾಗರ :- ದೇಶದ ಬೇರೆಬೇರೆ ಭಾಗಗಳಿಂದ ಕಲಾವಿದರು ಸಾಗರದಂತಹ ಊರುಗಳಲ್ಲಿ ಪ್ರದರ್ಶನ ನೀಡುವುದರಿಂದ ವಿವಿಧ ಕಲಾಪ್ರಕಾರಗಳು ಸ್ಥಳೀಯವಾಗಿ ಪರಿಚಯವಾಗುತ್ತದೆ. ಸಂಗೀತ ನೃತ್ಯದಂತಹ ಕಾರ್ಯಕ್ರಮಗಳಿಂದ ಮನಸ್ಸಿನ ದುಗುಡಗಳ ಕಳೆದು ನೆಮ್ಮದಿ ಸಿಗುತ್ತದೆ ಎಂದು ವಿದ್ವಾನ್ ಆನೂರು ಆರ್. ಅನಂತಕೃಷ್ಣ ಶರ್ಮ ಹೇಳಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಪರಿಣಿತಿ ಕಲಾಕೇಂದ್ರದ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಹತ್ತನೇ ಪರಿಣಿತಿ ರಾಷ್ಟ್ರೀಯ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಗೀತ ನೃತ್ಯ ದಂತಹ ಕಾರ್ಯಗಳು ಸಮಾಜವನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಮನಸ್ಸಿನ ದುಗುಡತೆ ದೂರ ಮಾಡಿ ಮಾನಸಿಕ ನೆಮ್ಮದಿ ನೀಡುತ್ತದೆ. ರಾಷ್ಟ್ರಮಟ್ಟದ ಕಲಾವಿದರು ನೀಡುವ ಪ್ರದರ್ಶನಗಳಿಂದ ಸ್ಥಳೀಯವಾಗಿ ಅದನ್ನು ಕಲಿತುಕೊಳ್ಳುವ ಜೊತೆಗೆ ವಿವಿಧ ಕಲೆ ಕುರಿತು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಪರಿಣಿತಿ ಕಲಾಕೇಂದ್ರ ಕಳೆದ ಹತ್ತು ವರ್ಷಗಳಿಂದ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಸಂತೋಷದ ಸಂಗತಿ ಎಂದರು.
ಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು ಮಾತನಾಡಿ, ಹೊರರಾಜ್ಯದಿಂದ ಬಂದ ಕಲಾವಿದರಿಗೆ ನಾವು ಗೌರವ ಕೊಡುವ ಜೊತೆಗೆ ಅವರ ಕಲೆಯನ್ನು ಆಸ್ವಾದನೆ ಮಾಡಬೇಕು. ಸಾಗರದಲ್ಲಿ ನಡೆಯುವ ಇಂತಹ ಸಂಗೀತ ನೃತ್ಯೋತ್ಸವಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಮಾ.ಸ.ನಂಜುಂಡಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಶುಂಠಿ ಸತ್ಯನಾರಾಯಣ ಭಟ್, ಗಜೇಂದ್ರ ಸಾಗರ್, ಕೃಷ್ಣಮೂರ್ತಿ ಆಚಾರ್ ಮತ್ತು ಪ್ರೊ. ಕೆ.ಆರ್.ಕೃಷ್ಣಯ್ಯ ಅವರಿಗೆ ಪರಿಣಿತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಎಚ್., ಟಿ.ಡಿ.ಪಾಂಡುರಂಗ, ಕೆ.ಸಿದ್ದಪ್ಪ, ವಿಠ್ಠಲ್ ಪೈ, ಸುಂದರ್ ಭಾಸ್ಕರ್ ಉಪಸ್ಥಿತರಿದ್ದರು, ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಎಂ. ಗೋಪಾಲ ಸ್ವಾಗತಿಸಿದರು. ಮಾಧವ ಭಟ್ ವಂದಿಸಿದರು. ಮಮತಾ ರಾಜಕುಮಾರ್ ನಿರೂಪಿಸಿದರು. ನಂತರ ಪಂಜಾಬಿನ ಬಾಂಗ್ರಾ ನೃತ್ಯ, ಗುಜರಾತ್‍ನ ರಾತ್ವ ನೃತ್ಯ, ಬೆಂಗಳೂರಿನ ಸುಮನ್ ನಾಗೇಶ್ ತಂಡದಿಂದ ಭರತನಾಟ್ಯ, ವಿದ್ವಾನ್ ಅನಂತ ಕೃಷ್ಣ ಶರ್ಮ ಅವರ ತಂಡದಿಂದ ಲಯ ಲಾವಣ್ಯ ಪ್ರದರ್ಶನಗೊಂಡಿತು.