google.com, pub-9939191130407836, DIRECT, f08c47fec0942fa0

ಶಿವಮೊಗ್ಗ :-ಜಿಲ್ಲೆ ಪ್ರತಿಷ್ಠಿತ ಸುಬ್ಬಯ್ಯ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಹಾಗೂ ನಗರದ ಖ್ಯಾತ ವೈದ್ಯರಾಗಿರುವ ಡಾ. ನಾಗೇಂದ್ರ ಅವರ ತಂದೆ ಟಿ. ಸುಬ್ಬರಾಮಯ್ಯ (85) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮ್ಯಾಕ್ಸ್ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ.

೨೦೦೩ರಲ್ಲಿ ಸುಬ್ಬಯ್ಯ ಆಸ್ಪತ್ರೆ ಆರಂಭಗೊಂಡಿತು. ತಡಿಕೇಲ ಸುಬ್ಬಯ್ಯ ಟ್ರಸ್ಟ್ ನ ಅಡಿ ಆರಂಭಗೊಂಡ ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ಟಿ. ಸುಬ್ಬರಾಮಯ್ಯನವರೇ ಸಂಸ್ಥಾಪಕರಾಗಿದ್ದಾರೆ. ಇದರಿಂದ ಅನೇಕ ವೈದ್ಯರಿಗೆ ಮಾರ್ಗದರ್ಶಿಯಾಗಿದೆ. ಇವರ ಈ ಟ್ರಸ್ಟ್. ಡಾ. ನಾಗೇಂದ್ರ, ಡಾ. ಎಸ್. ಶ್ರೀನಿವಾಸ, ಡಾ. ಲತಾ ತೆಲಂಗ್ ಡಾ. ವಿನಯ ಕುಮಾರಿ ಅವರಿಂದ ವೈದ್ಯಕೀಯ ವೃತ್ತಿ ಆರಂಭಗೊಂಡಿತ್ತು.

ಮೂಲತಃ ಕೃಷಿಕರಾದ ಟಿ. ಸುಬ್ಬರಾಮಯ್ಯ 2003ರಲ್ಲಿ ಆರಂಭಿಸಲಾದ ಸುಬ್ಬಯ್ಯ ಟ್ರಸ್ಟ್ ಯಶಸ್ವಿಯಾಗಿ ನಡೆಸಿಕೊಂಡು ಬಂದ ಪರಿಣಾಮ ಶಿವಮೊಗ್ಗದಲ್ಲಿ ಮ್ಯಾಕ್ಸ್ ಮತ್ತು ಭರತ್ ಆಸ್ಪತ್ರೆಗಳ ಹುಟ್ಟಿಗೂ ಕಾರಣವಾಗಿದೆ.

Leave a Reply

Your email address will not be published. Required fields are marked *