google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಇಂದಿನ ಯುವ ಪೀಳಿಗೆಯು ಸೃಜನಶೀಲ ತಂತ್ರಜನದ ಜಣತನವನ್ನು ಹೊಂದಿದ್ದು ಇದರೊಂದಿಗೆ ಆರ್ಥಿಕ ಹೂಡಿಕೆಯ ಅರಿವನ್ನು ವಿಸ್ತರಿಸಿಕೊಳ್ಳಿ ಎಂದು ಜೆ ಎನ್ ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಕರೆ ನೀಡಿದರು.

ನಗರದ ಜೆ ಎನ್ ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಕಾಲೇಜಿನ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ನಿಂದ ಏರ್ಪಡಿಸಿದ್ದ ನೂತನ ಕೆನರಾ ಆ್ಯಸ್ಪೈರ್ಯ್ ಪ್ರಾಡೆಕ್ಟ್ ಲೋಕಾ ರ್ಪಣೆಗೊಳಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಆರ್ಥಿಕ ಹೂಡಿಕೆ ಮತ್ತು ಉಳಿತಾಯದ ಕುರಿತಾಗಿ ಆಸಕ್ತಿ ಕಡಿಮೆಯೆ ನಿಜ. ಅದರೇ ಅಂತಹ ಆಸಕ್ತಿ ಮುಂದಿನ ದಿನಗಳಲ್ಲಿ ಅನೇಕ ಲಾಭಾಂಶವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. ನಮ್ಮ ನಿರ್ಧಾರ ಗುರಿ ಹೂಡಿಕೆ ಮತ್ತು ರೂಪಾಯಿಯ ಮಲ್ಯವಾಗಿ ಪರಿವರ್ತಿಸುವತ್ತ ಗಮನ ಹರಿಸಬೇಕಿದೆ. ಅಂತಹ ನಿರ್ವಹಣೆಗೆ ಇಂತಹ ಬ್ಯಾಂಕಿಂಕ್ ಸೌಲಭ್ಯಗಳು ಪೂರಕವಾಗಿ ಸ್ಪಂದಿಸಲಿದೆ. ಆನ್ಲೈನ್ ನಲ್ಲಿ ಸಿಗುವ ಅನೇಕ ಲಾಭಾಂಶದ ಆಕರ್ಷಣೆಗಳಿಗೆ ಅಂಧತ್ವದ ಮೋಸ ಹೋಗದಿರಿ ಎಂದು ಹೇಳಿದರು.

ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಸಿ. ಶ್ರೀಕಾಂತ್ ಮಾತನಾಡಿ, ಕೆನರಾ ಬ್ಯಾಂಕ್ ವಿದ್ಯಾರ್ಥಿ ಸ್ನೇಹಿ ಉಳಿ ತಾಯ ಖಾತೆಯ ಜೊತೆಗೆ ಕೌಶಲ್ಯತೆ ದೀಪನಗೊಳಿಸುವ ವಿಷಯಗಳ ಕುರಿತಾಗಿ ಚಿಂತನೆ ನಡೆಸುತ್ತಿರುವುದು ಅಭಿನಂದನೀಯ. ಪ್ರತಿನಿತ್ಯದ ಕಲಿಕೆ ಯಲ್ಲಿ ಒದಗುವ ಆರ್ಥಿಕ ಅವಶ್ಯಕತೆ ಗಳನ್ನು ಸಮರ್ಪಕವಾಗಿ ನಿರ್ವಹಿಸಲು ಇಂಥಹ ಯೋಜನೆಗಳ ಪ್ರಯೋಜನ ಪಡೆಯಿರಿ ಎಂದು ಹೇಳಿದರು.

ಉಪ ಮಹಾ ಪ್ರಬಂಧಕರಾದ ಆರ್.ದೇವರಾಜ್ ಮಾತನಾಡಿ, ವೈಯುಕ್ತಿಕ ಹಿತಾಸಕ್ತಿಯ ಜೊತೆಗೆ ಕುಟುಂಬದ ಆರ್ಥಿಕ ಅವಶ್ಯಕತೆಗಳ ಪೂರೈಕೆಗೆ ಅನೇಕ ಅವಕಾಶಗಳಿದ್ದು, ವಿದ್ಯಾರ್ಥಿಗಳು ಈ ಕುರಿತಾಗಿ ಒಂದಿಷ್ಟು ಆಲೋಚನೆ ಮಾಡಬೇಕಿದೆ. ಕೌಶಲ್ಯತೆ ನಮ್ಮೊಳಗಿನ ಶಕ್ತಿ. ಅಂತಹ ಶಕ್ತಿಯನ್ನು ಸ್ವಯಂ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಹೇಳಿದರು.

ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಸ್ವರೂಪ ರಾಣಿ, ಕೆನರಾ ಜೆ ಎನ್ ಎನ್ ಸಿ ಶಾಖೆಯ ವ್ಯವಸ್ಥಾಪಕರಾದ ಪಲ್ಲವಿ, ಉನ್ನತ ಅಧಿಕಾರಿಗಳಾದ ಗೀತಾಂಜಲಿ ಪ್ರಸನ್ನ ಕುಮಾರ್, ಉತ್ತೇಜ್, ಕಾಲೇಜಿನ ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ.ಸಿ. ಶ್ರೀಕಾಂತ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *