ಶಿವಮೊಗ್ಗ :- ಬೆಂಗಳೂರಿನ ಓಂಕಾರ್ ಆಶ್ರಮದಲ್ಲಿ ಕರ್ನಾಟಕ ಯೋಗಾ ಸಂಘದಿಂದ ನಡೆದ ರಾಜ್ಯ ಮಟ್ಟದ ಯೋಗ ಛಾಂಪಿಯನ್ ಶಿಪ್ ಮತ್ತು ರಾಷ್ಟ್ರೀಯ ಆಯ್ಕೆ ಪ್ರಕ್ರಿಯಯಲ್ಲಿ ಶಿವಮೊಗ್ಗ ನಗರದ ಅತ್ಯಂತ ಹಿರಿಯ ಯೋಗ ಕೇಂದ್ರ ಶ್ರೀ ರಾಘವೇಂದ್ರ ಯೋಗ ಕೇಂದ್ರದ ಪಟುಗಳು ಸಮಗ್ರ ಪ್ರಶಸ್ತಿ ಪಡೆದು ಜಿಲ್ಲೆಗೆ ಹಾಗೂ ಕೇಂದ್ರಕ್ಕೆ ಕೀರ್ತಿ ತಂದಿದ್ದಾರೆ.
ಕೇಂದ್ರದ ಸಂಸ್ಥಾಪಕರಾದ ಯೋಗ ಸಾಮ್ರಾಟ್ ಗೋಪಾಲಕೃಷ್ಣ ಅವರು ಸ್ಪರ್ಧೆಯಲ್ಲಿ ಸತತ ಮೂರನೇ ಭಾರಿಗೆ ಬಂಗಾರದ ಪದಕ ಪಡೆದು ಹ್ಯಾಟ್ರಿಕ್ ಗೋಲ್ಡ್ ವಿನ್ನರ್ ಆಗಿದ್ದಾರೆ.
ವಿವಿಧ ವಿಭಾಗದಲ್ಲಿ ನಂದೀಶ್ ಮತ್ತು ರಾಕ್ಷೋಘ್ನ ಬಂಗಾರ ಪದಕ, ಬಸವರಾಜ್ ಮತ್ತು ಡಾ. ವಿವೇಕ್ ಬೆಳ್ಳಿ ಪದಕ, ಚಿದಾನಂದ್ ಮತ್ತು ವೆಂಕಟಾಚಲುವಯ್ಯ ಕ್ರಮವಾಗಿ 4ಮತ್ತು 5ನೇ ಸ್ಥಾನ ಪಡೆದಿದ್ದಾರೆ. ಮೇಡಲಿಸ್ಟ್ ಚಾಂಪಿಯನ್ ಷಿಪ್ ನಲ್ಲಿ ನಿಶಾಂತ್ ಸಿ. ಬೆಳ್ಳಿ ಪದಕ, ಬಸವ ರಾಜು, ಕಂಚಿನ ಪದಕ, ನಂದೀಶ್ 5ನೇ ಸ್ಥಾನ ಪಡೆದದ್ದಾರೆ. ಈ ಮೂಲಕ ಡಿಸೆಂಬರ್ ತಿಂಗಳಿನಲ್ಲಿ ಜಾರ್ಖಂಡ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ಗೆ ಈ ಎಲ್ಲರೂ ಆಯ್ಕೆಯಾಗಿದ್ದಾರೆ.
ವಿಜೇತರಿಗೆ ಕರ್ನಾಟಕ ಯೋಗ ಸಂಸ್ಥೆ ಮತ್ತು ತರಬೇತುದಾರರು, ಶಿವಮೊಗ್ಗ ಶ್ರೀ ರಾಘವೇಂದ್ರ ಯೋಗ ಕೇಂದ್ರದ ಎಲ್ಲರೂ ಅಭಿನಂದಿಸಿದ್ದಾರೆ.