ಶಿವಮೊಗ್ಗ :- ಪ್ರತಿಷ್ಠಿತ ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿ ಸಂಘದ ಮುಂದಿನ 5ವರ್ಷಗಳ ಅವಧಿಗೆ ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಯು ಈ ಹಿಂದೆ ನ. 17ರಂದು ನಿಗದಿಯಾಗಿತ್ತು. ಆದರೆ ಇದೀಗ ಸಂಘದ ಚುನಾವಣಾಧಿಕಾರಿಗಳು (ರಿಟನಿಂಗ್ ಆಫೀಸರ್) ಅವರ ಸೂಚನೆ ಮೇರೆಗೆ ನಿಗದಿಯಾಗಿದ್ದ ಚುನಾವಣೆಯನ್ನು ದಿನಾಂಕವನ್ನು ಡಿ. 24ರಂದು ನಡೆಸಲು ತೀರ್ಮಾನಿಸಲಾಗಿದೆ.
ಆದ್ದರಿಂದ ಸಂಘದ ಸುಸ್ತಿ ಸಾಲವನ್ನು ಮರುಪಾವತಿಸಲು ಅ. 25ರೊಳಗೆ ಬದಲಾಗಿ ಅ. 30 ರವರೆಗೆ ವಿಸ್ತರಿಸಲಾಗಿದೆ. ಸದಸ್ಯ ಬಾಂಧವರು ಸುಸ್ತಿಸಾಲಗಳನ್ನು ಸೊಸೈಟಿ ನಿಗದಿಪಡಿಸಿರುವ ದಿನಾಂಕದ ಕಾಲಮಿತಿಯಲ್ಲಿ ಸಂಘದ ಕಛೇರಿ ಸಮಯ 6ಗಂಟೆಯೊಳಗೆ ಸುಸ್ತಿಸಾಲವನ್ನು ಮರು ಪಾವತಿಸಲು ಕೋರಲಾಗಿದೆ.