google.com, pub-9939191130407836, DIRECT, f08c47fec0942fa0

12 ವರ್ಷದ ಅವಿವಾಹಿತ ಕನ್ಯೆಗೆ ಕುಮಾರಿ ಎನ್ನುತ್ತಾರೆ. ಅವಳ ಸ್ಮೃತ್ಯುಕ್ತ ಲಕ್ಷಣಗಳು ಹೀಗಿವೆ ?

ಅಷ್ಟವರ್ಷಾ ಭವೇದ್ ಗೌರಿ ದಷ ವರ್ಷಾಚ ಕನ್ಯಕಾ|
ಸಂಪ್ರಾಪ್ತೇ ದ್ವಾದಶೇ ವರ್ಷೇ ಕುಮಾರೀತ್ಯಭಿದೀ ಯತೇ||

ಅರ್ಥ: ಹುಡುಗಿಗೆ 8ನೇ ವರ್ಷದಲ್ಲಿ ‘ಗೌರಿ’, 10ನೇ ವರ್ಷದಲ್ಲಿ ‘ಕನ್ಯಾ’ ಮತ್ತು 12ನೇ ವರ್ಷವು ಪ್ರಾರಂಭವಾದಾಗ ‘ಕುಮಾರಿ’ ಎನ್ನುತ್ತಾರೆ.

ಕುಮಾರಿ ಪೂಜೆ ಏಕೆ ಮಾಡುತ್ತಾರೆ ?

ಮುತ್ತೈದೆಯರು ದೇವಿಯ ಪ್ರಕಟ ಶಕ್ತಿಯ ಪ್ರತೀಕವಾಗಿದ್ದು ಕುಮಾರಿಯರು ದೇವಿಯ ಅಪ್ರಕಟ ಶಕ್ತಿಯ ಪ್ರತೀಕವಾಗಿದ್ದಾರೆ. ಪ್ರಕಟ ಶಕ್ತಿಯಲ್ಲಿ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ಅಪವ್ಯಯವಾಗುವುದರಿಂದ ಮುತ್ತೈದೆಯರ ಬದಲು ಕುಮಾರಿಯರಲ್ಲಿ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

ಕುಮಾರಿ ಪೂಜೆ ಹೇಗೆ ಮಾಡಬೇಕು ?

ನವರಾತ್ರಿಯಲ್ಲಿ ಒಂಬತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಬತ್ತನೇ ದಿನ ಒಂಬತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ. ‘ಅವಳು ನಿರ್ದೋಷ, ನಿರೋಗಿ ಮತ್ತು ಅವ್ಯಂಗಳಾಗಿರಬೇಕು’ ಎಂದೂ ಹೇಳಲಾಗಿದೆ. ದೇವೀಪೂಜೆಯಾದ ನಂತರ ಕುಮಾರಿಯ ಪೂಜೆಯನ್ನು ಮಾಡುತ್ತಾರೆ. ಮೊದಲು ಮುಂದಿನ ಮಂತ್ರದಿಂದ ಅವಳ ಆವಾಹನೆಯನ್ನು ಮಾಡುತ್ತಾರೆ.

ಮಂತ್ರಾಕ್ಷರಮಯೀಂ ಲಕ್ಷ್ಮೀಂ ಮಾತೃಣಾಂ ರೂಪ ಧಾರಿಣೀಮ್|
ನವದುರ್ಗಾತ್ಮಿಕಾಂ ಸಾಕ್ಷಾತ್ ಕನ್ಯಾಮಾವಾಹ ಯಾಮ್ಯಹಮ್||

ಅರ್ಥ: ಮಂತ್ರಾಕ್ಷರಮಯ, ಲಕ್ಷ್ಮೀ ಸ್ವರೂಪ, ಮಾತೃಕೆಗಳ ರೂಪವನ್ನು ಧರಿಸುವ ಹಾಗೂ ಸಾಕ್ಷಾತ್ ನವ ದುರ್ಗಾತ್ಮಿಕೆಯಾಗಿರುವಂತಹ ಕನ್ಯೆಯನ್ನು ನಾನು ಆವಾಹನೆ ಮಾಡುತ್ತೇನೆ.

ಮೊದಲು ಕುಮಾರಿಯ ಕಾಲುಗಳನ್ನು ತೊಳೆಯುತ್ತಾರೆ, ಅವಳನ್ನು ಸುಶೋಭಿತ ಚೌರಂಗದ ಮೇಲೆ (ಎತ್ತರವಾದ ಮರದ ಮಣೆಯ ಮೇಲೆ) ಕೂರಿಸುತ್ತಾರೆ, ಗಂಧ, ಪುಷ್ಪ, ಲಂಗ-ರವಿಕೆ ಕೊಡುತ್ತಾರೆ ಮತ್ತು ಅವಳ ಕೊರಳಿನಲ್ಲಿ ಹೂಮಾಲೆಯನ್ನು ಹಾಕುತ್ತಾರೆ. ಅವಳಿಗೆ ಪಂಚಾಮೃತ ಮತ್ತು ಮೃಷ್ಠಾನ್ನವನ್ನು ಸಮರ್ಪಿಸುತ್ತಾರೆ. ನಂತರ ಅವಳಿಗೆ ನಮಸ್ಕಾರ ಮಾಡುತ್ತಾರೆ’ ಶಾಕ್ತ ತಂತ್ರದಲ್ಲಿ ಕುಮಾರಿಪೂಜೆಗೆ ವಿಶೇಷ ಮಹತ್ವವಿದೆ.

ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಕ್ತಿ’
ಸಂಗ್ರಹ: ಶ್ರೀ. ವಿನೋದ ಕಾಮತ್ ರಾಜ್ಯ ವಕ್ತಾರರು, ಸನಾತನ ಸಂಸ್ಥೆ

Leave a Reply

Your email address will not be published. Required fields are marked *