ಶಿವಮೊಗ್ಗ :- ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಗೀತಾಗಾಯನ ಶಾಂತಿ ನಡಿಗೆ ಜಾಥಾವನ್ನು ಅ. 2 ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ತಾಲೂಕು ಹೊಳಲೂರಿನ ಗಾಂಧಿ ಸರ್ಕಲ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಪತಂಜಲಿ ಜೆ. ನಾಗರಾಜ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ನಿರಂತರವಾಗಿ ಗಾಂಧಿ ಜಯಂತಿಯನ್ನು ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕರ್ನಾಟಕ ಜನಪದ ಕಲಾ ಕೇಂದ್ರ, ಪತಂಜಲಿ ಹೊಳಲೂರು ಶಾಖೆ, ಸರ್ಕಾರಿ ಶಾಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಮಸ್ತ ಗ್ರಾಮಸ್ಥರ ಆಶ್ರಯದಲ್ಲಿ ಏರ್ಪಡಿಸಲಾಗಿದೆ ಎಂದರು.
ಹೊಳಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ಮಹಾತ್ಮ ಗಾಂಧಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಚಾಲನೆ ನೀಡುವರು. ಅಧ್ಯಕ್ಷತೆಯನ್ನು ಪತಂಜಲಿ ಹೊಳಲೂರು ಶಾಖೆ ಗೌ. ಉಪಾಧ್ಯಕ್ಷ ಎ.ಪಿ.ಕೋಟ್ರೇಶ್ ಪರಮಶಿವ ವಹಿಸುವರು, ಅತಿಥಿಗಳಾಗಿ ಪತಂಜಲಿ ಹೊಳಲೂರು ಶಾಖೆ ಅಧ್ಯಕ್ಷ ಗಿರೀಶ್, ಪತಂಜಲಿ ಆಡಳಿತಾಧಿಕಾರಿ ಎಂ.ಪೂವಯ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪರಿಸರ ಸಿ.ರಮೇಶ್, ನಿರ್ದೇಶಕರಾದ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗಳ ಪದಕ ವಿಜೇತ ಗೃಹ ರಕ್ಷಕದಳದ ಅಧಿಕಾರಿ ಜಿ.ಈ. ಶಿವಾನಂದಪ್ಪ, ಸಿ. ಅಶ್ವತ್ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕತ ಹಿರಿಯ ಜನಪದ ಕಲಾವಿದ ಭವಾನಿಶಂಕರ್‌ರಾವ್, ಕಲಾವಿದರಾದ ಮಾಧವಮೂರ್ತಿ, ಶೋಭ ಮಂಜುನಾಥ್ ಭಾಗವಹಿಸುವರು ಎಂದರು.
ಪತಂಜಲಿ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪರಿಸರ ಸಿ.ರಮೇಶ್ ಮಾತನಾಡಿ, ಪತಂಜಲಿ ಕಲಾ ತಂಡದ ಕಲಾವಿದರಿಂದ ನಾಡು ನುಡಿಗೆ ಸಂಬಂಧಿಸಿದಂತೆ ದೇಶಭಕ್ತಿಗೀತೆ, ಜನಪದ ಗೀತೆ, ಪರಿಸರ ಗೀತೆ, ನಡೆಸಲಾಗುವುದು, ಸರ್ಕಾರಿ ಶಾಲಾ ಮಕ್ಕಳು ಹಾಗೂ ಗ್ರಾಮಸರಿಂದ ಪ್ರತಿಜವಿಧಿ ಸ್ವೀಕಾರ ಶಾಂತಿ ನಡೆಗೆ ಜಥಾವನ್ನು ಏರ್ಪಡಿಸಲಾಗಿದೆ ಎಂದರು.
ಪತಂಜಲಿ ಹೊಳಲೂರು ಶಾಖೆಯ ಗೌ:ಉಪಾಧ್ಯಕ್ಷ ಎ.ಪಿ.ಕೋಟ್ರೇಶ್ ಪರಮಶಿವ ಮಾತನಾಡಿ ಕಳೆದ ವರ್ಷ ಹೊಳಲೂರಿನಲ್ಲಿ ಗಾಂಧಿ ಜಯಂತಿಯನ್ನು ಸರ್ವ ಜನಾಂಗದ ಸಹಕಾರದೊಂದಿಗೆ ಸರಳವಾಗಿ ಆಚರಿಸಿದ್ದೇವೆ. ಈ ವರ್ಷ ಸರಳವಾಗಿ ಶಾಂತಿ ನಡಿಗೆ ಜಥಾವನ್ನು ಸರ್ಕಾರಿ ಶಾಲಾ ಮಕ್ಕಳು, ಗ್ರಾಮಸ್ಥರೊಂದಿಗೆ ಅಚರಿಸುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಎಂ. ಪೂವಯ್ಯ ಉಪಸ್ಥಿತರಿದ್ದರು.