ಶಿವಮೊಗ್ಗ :- ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವ ಕಾಂಕ್ಷೆಯ ಯೋಜನೆಯಾದ ವಿಕಸಿತ ಭಾರತದಿಂದ ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಶಕ್ತಿ ಸಿಗಲಿದೆ ಎಂದು ಯಧುವೀರ್ ಕೃಷ್ಣ ದತ್ತ ಚಾಮರಾಜ್ ಒಡೆಯರ್ ಆಭಿಪ್ರಾಯಪಟ್ಟರು.
ಆರ್ಯ ವೈಶ್ಯ ಶ್ರೀರಾಮ ಸಹಕಾರ ಸಂಘವು ನಗರದ ಅಲ್ಲಮ ಪ್ರಭು ಮೈದಾನದಲ್ಲಿ ಹಮ್ಮಿಕೊಂಡಿರುವ ಸಂಘದ ಶತಮಾನೋತ್ಸವದ ಕಾರ್ಯಕ್ರಮದ ಎರಡನೇ ದಿನವಾದ ಒಂದು ಸಹಕಾರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರು 2047 ಸಾಲಿಗೆ ದೃಷ್ಟಿ ಇಟ್ಟುಕೊಂಡು ವಿಕಸಿತ ಭಾರತ ಕನಸು ಹೊಂದಿದ್ದಾರೆ.ಅದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ವಿಶೇಷವಾಗಿ ದೇಶದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಂದು ಸಹಕಾರಿ ಸಂಘ ಸ್ಥಾಪನೆ ಆಗಬೇಕು. ಆಗ ಮೂಕ ಪ್ರತಿಯೊಬ್ಬರು ಸ್ವಾವಲಂಬಿ ಬದುಕು ಸಾಗಿಸಬೇಕೆನ್ನುವುದು ಅವರ ಕಲ್ಪನೆಯಾಗಿದೆ.ಇದರಿಂದ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಶಕ್ತಿ ಸಿಗಲಿದೆ ಎಂದರು.
ಮೈಸೂರು ರಾಜ ಮನೆತನವೂ ಮಲೆನಾಡಿಗೆ ಅಪಾರವ ಕೊಡುಗೆ ನೀಡಿದೆ.ಅರಸರ ಕಾಲದಲ್ಲಿ ಸ್ಥಾಪನೆಯಾದ ಅನೇಕ ಸಂಘ- ಸಂಸ್ಥೆಗಳು ನೂರಾರು ವರ್ಷ ದಾಟಿ, ಜನ ಸೇವೆಗೆ ಶ್ರಮಿಸುತ್ತಿವೆ ಎನ್ನುವುದಕ್ಕೆ ಆರ್ಯ ವೈಶ್ಯ ಶ್ರೀರಾಮ ಸಹಕಾರ ಸಂಘವು ಸಾಕ್ಷಿ. ಇಂತಹ ಅನೇಕಸಂಸ್ಥೆಗಳು ಇಲ್ಲಿವೆ .ಇದಕ್ಕೆಕಾರಣ ಆಂದಿನಅರಸರ ದೂರದೃಷ್ಟಿಯ ಚಿಂತನೆಗಳು ಕಾರಣ.ಅಂತಹ ಅರಸರ ಪ್ರತಿಧ್ವನಿಯಾಗಿ ಪ್ರಧಾನಿನರೇಂದ್ರ ಮೋದಿ ಅವರು ಕೂಡ ವಿಕಸಿತ ಭಾರತದ ಯೋಜನೆ ರೂಪಿಸಿದ್ದಾರೆಂದು ಹೇಳಿದರು.
ವಿಕಸಿತ ಭಾರತದ ಕಲ್ಪನೆಯಲ್ಲಿ ಸುವರ್ಣಯುಗ ತರರುವುದು ಪ್ರಧಾನಿ ಅವರ ಕನಸಾಗಿದೆ.ಆ ಕನಸು ನನಸಾಗಲು ನಿಮ್ಮೆಲರ ಸಹಕಾರ ಅಗತ್ಯ. ಸೌಹಾರ್ದದತೆ ಮತ್ತು ಸಹಕಾರ ದಿಂದ ಯಶಸ್ಸು ಸಾಧ್ಯ ಎಂದು ಮನವಿಮಾಡಿದರು.
ಮಲನಾಡಿನ ಜನ ಪುಣ್ಯವಂತರು.ಇಲ್ಲಿ ವಾತಾವರಣ ನನಗೆ ತುಂಬಾ ಇಷ್ಟವಾಗಿಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅವಧಿಯಲ್ಲಿ ಮಲೆನಾಡಿನಲ್ಲಿ ಅನೇಕಯೋಜನೆಗಳನ್ನು ಜರಿಗೆ ತಂದಿದ್ದರು.ಅವೆಲ್ಲವೂ ಈಗಲೂ ಇವೆ.
ಎಂದು ಸ್ಮರಿಸಿದರು.
ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಮಾಜಿಸಭಾಪತಿ ಹಾಗೂ ಹಿರಿಯ ರಾಜಕಾರಣಿ ಡಿ.ಎಚ್.ಶಂಕರಮೂರ್ತಿ, ಆರ್ಯ ವೈಶ್ಯ ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷ ಡಿ.ಎಂ.ಅರವಿಂದ್,ವಾಸವಿ ಪೀಠದ ಸಚ್ವಿದಾನಂದ ಸರಸ್ವತಿ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಇದ್ದರು.