google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಸಿದ್ದೇಶ್ವರ ನಗರದಲ್ಲಿ ಸಂಭವಿಸಿದ ಗ್ಯಾಸ್ ಸ್ಫೋಟದಿಂದ ಹಾನಿಗೊಳಗಾದ ಕುಟುಂಬಗಳಿಗೆ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರು ವಿಷ್ಣು ಸಮಾಜ, ವಿಕಾಸ್ ಟ್ರಸ್ಟ್ ಹಾಗೂ ಬಟ್ಟೆ ವರ್ತಕರ ಸಂಘದ ಸದಸ್ಯರೊಂದಿಗೆ ಭೇಟಿ ಮಾಡಿ, ಅವರ ಸಹಕಾರದೊಂದಿಗೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳು, ಬಟ್ಟೆಗಳು, ಬೆಡ್‌ಶೀಟ್‌ಗಳು ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ವಿಕಾಸ್ ಟ್ರಸ್ಟ್ ಅಧ್ಯಕ್ಷ ಬಿ.ಎ. ರಂಗನಾಥ್, ವಿಷ್ಣು ಸಮಾಜದ ಪ್ರಮುಖರಾದ ಜೆಟು ಸಿಂಗ್, ಬಟ್ಟೆ ವರ್ತಕರ ಸಂಘದ ಪ್ರಮುಖರಾದ ಕುಮಾರ್, ಆರ್‌ಎಸ್‌ಎಸ್ ಪ್ರಮುಖರಾದ ಗಿರೀಶ್ ಕಾರಂತ್ ಹಾಗೂ ಸಚ್ಚಿದಾನಂದ, ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಸಮಾಜದ ಪ್ರಮುಖರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *