
ಬೆಳಗಾವಿ :- ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟವು ಬೆಳಗಾವಿಯಲ್ಲಿ ಆಂದೋಲನ ನಡೆಸಿ ಖಆPಖ ಇಲಾಖೆಯ ವಿರುದ್ಧ ತಮ್ಮ ನ್ಯಾಯೋಚಿತ ಬೇಡಿಕೆಗಳನ್ನು ಮಂಡಿಸಿತು. ಶಿವಮೊಗ್ಗ ವಿಧಾನ ಪರಿಷತ್ ಶಾಸಕರು ಡಿ.ಎಸ್. ಅರುಣ್ ಅವರು ಆಂದೋಲನದಲ್ಲಿ ಭಾಗವಹಿಸಿ ಸದಸ್ಯರಿಗೆ ಬೆಂಬಲ ಸೂಚಿಸಿದರು.
ಗ್ರಾ.ಪಂ. ವ್ಯವಸ್ಥೆ ಬಲಪಡಿಸಲು ಸರ್ಕಾರ ಬೇಡಿಕೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಮುಖ್ಯ ಬೇಡಿಕೆಗಳು ೧೫ನೇ ಹಣಕಾಸು ಆಯೋಗದ ೨೦೨೫-೨೫ರ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ, ಉದ್ಯೋಗ ಖಾತ್ರಿ ಯೋಜನೆಯ ಸಾಮಗ್ರಿ ವೆಚ್ಚವನ್ನು ತಕ್ಷಣ ಪಾವತಿ ಮಾಡಿ, ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಸಕಾಲಕ್ಕೆ ನಡೆಸಿ, ಘನತ್ಯಾಜ್ಯ ವಿಲೇವಾರಿ ಘಟಕಗಳ ಸಂಜೀವಿನಿ ಮಹಿಳೆಯರಿಗೆ ರಾಜ್ಯ ಸರ್ಕಾರವು ಮಾಸಿಕ ಗೌರವಧನವನ್ನು ನೀಡಬೇಕು, ಡಿ.ಎಸ್. ಅರುಣ್ ಅವರು ಆರ್‌ಡಿಪಿಆರ್ ಇಲಾಖೆಯ ಕಾರ್ಯದರ್ಶಿ ರಂದೀಪ್ ಅವರಿಗೆ ಸದಸ್ಯರ ಸಮಸ್ಯೆಗಳನ್ನು ವಿವರವಾಗಿ ತಿಳಿಸಿ, ಮಹಾ ಒಕ್ಕೂಟ ನೀಡಿದ ಮನವಿಯನ್ನು ಸಲ್ಲಿಸಿ, ಬೇಡಿಕೆಗಳನ್ನು ಅಧಿವೇಶನದಲ್ಲಿಯೂ ಪ್ರಸ್ತಾಪಿಸುವೆ. ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕು ಹಾಗೂ ಹಿತ ರಕ್ಷಿಸುವುದು ನಮ್ಮ ಹೊಣೆಗಾರಿಕೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷ ಶಾಸಕ ಕೆ.ಎಸ್.ನವೀನ್, ಮಂಜೇಗೌಡರು, ಸುನಿಲ್‌ಗೌಡ ಪಾಟೀಲ್ ಉಪಸ್ಥಿತರಿದ್ದರು.