google.com, pub-9939191130407836, DIRECT, f08c47fec0942fa0

ಶಿವಮೊಗ್ಗ : ರಾಯಲ್ ಅಮ್ಯೂಸ್‌ಮೆಂಟ್ಸ್‌ನಿಂದ ಶಿವಮೊಗ್ಗದಲ್ಲಿ ಇದೇ ಪ್ರಥಮಬಾರಿಗೆ ಶೇಷಾದ್ರಿಪುರಂನ ಶಂಕರಮಠ ರಸ್ತೆಗೆ ಹೊಂದಿಕೊಂಡಂತೆ ರೈಲ್ವೆ ಓವರ್ ಬ್ರಿಡ್ಜ್ ಬಳಿ ಇರುವ ಮೈದಾನದಲ್ಲಿ ಡಿ.೧೧ರ ನಾಳೆಯಿಂದ ಸುರೀಯಲ್ ವಾಟರ್ ಫಾಲ್ಸ್ ಎಕ್ಸಿಬಿಷನ್ ಆಯೋಜಿಸಲಾಗಿದೆ ಎಂದು ಮಾಲೀಕ ವಿಜಯ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಎಕ್ಸಿಬಿಷನ್ ಪ್ರತಿದಿನ ಸಂಜೆ 5ರಿಂದ ರಾತ್ರಿ 9.30ರ ವರೆಗೆ ನಡೆಯಲಿದೆ. ಇದರ ಕೇಂದ್ರ ಆಕರ್ಷಣೆ ಎಂದರೆ ವಾಟರ್‌ಫಾಲ್ಸ್ ಆಗಿದೆ. ಮಕ್ಕಳಿಗೆ ನೀರು ಎಂದರೆ ಬಹಳ ಪ್ರೀತಿ. ಒಂದು ಜಲಪಾತವನ್ನೇ ನಿರ್ಮಿಸಲಾಗಿದೆ. ಈ ಜಲಪಾತವು 35 ಅಡಿ ಎತ್ತರದಿಂದ ಧುಮುಕುತ್ತದೆ. ಜಲಪಾತದ ನೀರಿನೊಂದಿಗೆ ಆಟ ಆಡುವುದರ ಜೊತೆಗೆ ಮಕ್ಕಳಿಗಾಗಿ ಜಯಿಂಟ್‌ವ್ಹೀಲ್, ಕೊಲಂಬಸ್, ವಾಟರ್‌ಬೋಟ್ ಸೇರಿದಂತೆ ಹಲವು ಆಟಿಕೆಗಳು ಕೂಡ ಇರುತ್ತವೆ. ರೋಬೊಟಿಕ್ ಪ್ರಾಣಿಗಳ ಪ್ರದರ್ಶನ ಕೂಡ ಇರುತ್ತದೆ. ಇಡೀ ಕುಟುಂಬ ಸಮೇತ ಈ ಎಕ್ಸಿಬಿಷನ್ ನೋಡಬಹುದಾಗಿದೆ.

ಪ್ರವೇಶ ಶುಲ್ಕ ೮೦ ರೂ. ಇದೆ. ಎಕ್ಸಿಬಿಷನ್‌ನಲ್ಲಿ ವಿವಿಧ ಬಗೆಯ ತಿಂಡಿ-ತಿನಿಸು ಸುಮಾರು ೨೫ ಸ್ಟಾಲ್‌ಗಳು ಇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್, ಕಬೀರ್ ಇದ್ದರು.

Leave a Reply

Your email address will not be published. Required fields are marked *