google.com, pub-9939191130407836, DIRECT, f08c47fec0942fa0

ಬೆಂಗಳೂರು :- ಭಾರತ ತಂಡದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು 2025-28ರ ಅವಧಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಶಿವಮೊಗ್ಗ ವಲಯ ಪ್ರತಿನಿಧಿಯಾಗಿ ಡಿ.ಎಸ್. ಅರುಣ್ 722 ಮತಗಳನ್ನು ಪಡೆದು ಮತ್ತೆ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.

ಭಾನುವಾರದಂದು ಕೆಎಸ್‌ಸಿಎ ವಿವಿಧ ಸ್ಥಾನಗಳಿಗೆ ಚುನಾವಣೆ ನಡೆಯಿತು. ದಿಗ್ಗಜ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಬೆಂಬಲದೊಂದಿಗೆ ಗೇಮ್ ಚೇಂಬರ್ಸ್ ತಂಡ ಕಟ್ಟಿಕೊಂಡಿದ್ದ ವೆಂಕಿ ಅವರು ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಕ್ರಿಕೆಟಿಗ, ಆಡಳಿತಗಾರ ಬ್ರಿಜೇಶ್ ಪಟೇಲ್ ಅವರ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ಕೆ.ಎನ್. ಶಾಂತಕುಮಾರ್ ಅವರನ್ನು ಎದುರಿಸಿದ್ದರು. ಅಲ್ಲಿ 191 ಮತಗಳಿಂದ ಗೆಲುವು ಸಾಧಿಸಿರುವ ವೆಂಕಟೇಶ್ ಪ್ರಸಾದ್ ಅವರು, ಮೂರು ವರ್ಷಗಳ ಕಾಲ ಆಡಳಿತ ಮಾಡಲಿದ್ದಾರೆ. ಉಪಾಧ್ಯಕ್ಷರಾಗಿ ಸುಚಿತ್ ಸೋಮಸುಂದರ್, ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ ಅವರು ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆ ಭಾನುವಾರದಂದು ಯಶಸ್ವಿಯಾಗಿ ನಡೆಯಿತು. ಕಾಲ್ತುಳಿತ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರಿಕೆಟ್ ಮರಳಿ ತರುವುದು ಸೇರಿದಂತೆ ಇನ್ನೂ ಹಲವು ವಿಚಾರಗಳು ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚಿತ ವಿಷಯಗಳು. ಅಭ್ಯರ್ಥಿಗಳ ವಿಚಾರದಲ್ಲಿ ಎರಡು ಬಾರಿ ಕೋರ್ಟ್ ಮೆಟ್ಟಿಲೇರಿದ ನಂತರ ಚುನಾವಣೆ ಯಶಸ್ವಿಯಾಗಿ ನೆರವೇರಿದೆ.

Leave a Reply

Your email address will not be published. Required fields are marked *