
ಶಿವಮೊಗ್ಗ :- ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ ಇಂತಹ ಪವಿತ್ರ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ರಕ್ತದಾನಿಗಳಿಗೆ ಮಾಜಿ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಕೃತಜ್ಞತೆ ಸಲ್ಲಿಸಿದರು.
ರಕ್ತದಾನ ಪವಿತ್ರ ಕಾರ್ಯ, ರಕ್ತದಾನಿಗಳು ನಿಜವಾದ ಹಿರೋಗಳು
ಈ ಸಂದರ್ಭದಲ್ಲಿ ಅವರು ಮಾತನಾಡಿ, ಮನುಕುಲದ ಮಾನವೀಯ ಸೇವೆಗಳಿಗೆ ಶಿವಮೊಗ್ಗ ನಗರದ ಸಾರ್ವಜನಿಕರು ಸದಾ ನಮ್ಮ ಜೊತೆ ಕೈಜೋಡಿಸುತ್ತಾರೆ ಎನ್ನುವುದಕ್ಕೆ ಇವತ್ತಿನ ರಕ್ತದಾನ ಶಿಬಿರವೇ ಸಾಕ್ಷಿ. ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹೀರೋಗಳು ನಮ್ಮ ಕರೆಗೆ ಸ್ಪಂದಿಸಿ. ನೂರು ಜನರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರ ದಾನಿಗಳಾಗಿದ್ದಾರೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಮನುಕುಲದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದ ಅವರು, ಎಲ್ಲಾ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಉಡುಗೊರೆ ಗಳನ್ನು ನೀಡಿ ಗೌರವಿಸಿದರು. ಜೊತೆಗೆ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಸ್.ಬಿ. ಶಿವಕುಮಾರ್, ಕಾಶಿ ವಿಶ್ವನಾಥ್, ಗ್ಯಾರೆಂಟಿ ಸಮಿತಿಯ ಸದಸ್ಯರಾದ ಹೆಚ್.ಎಂ. ಮಧು, ಕೆ . ದೇವೇಂದ್ರಪ್ಪ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷ ಧರಣೇಂದ್ರ ದಿನಕರ್, ಮಾಜಿ ಅಧ್ಯಕ್ಷ ಜಿ. ವಿಜಯಕುಮಾರ್, ರೆಡ್ ಕ್ರಾಸ್ ಸಭಾಪತಿ ಎಸ್.ಪಿ. ದಿನೇಶ್, ಗೌರವ ಕಾರ್ಯದರ್ಶಿ ಡಾ. ದಿನೇಶ್, ಕಾಂಗ್ರೆಸ್ ಮುಖಂಡರಾದ ಎಸ್. ಚಿನ್ನಪ್ಪ, ಸಮಾಜ ಸೇವಕ ಹಾಗೂ ಮೆಸ್ಕಾಂ ನಿರ್ದೇಶಕ ಹೆಚ್.ಎಸ್. ಶರಶ್ಚಂದ್ರ ಸೇರಿದೆಂತೆ ಕಾಂಗ್ರೆಸ್ ಮುಖಂಡರು, ಯೋಗೀಶ್ ಅಭಿಮಾನಿ ಬಳಗದವರು ಹಾಗೂ ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.