google.com, pub-9939191130407836, DIRECT, f08c47fec0942fa0

ಶಿವಮೊಗ್ಗ:  ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ನೇತೃತ್ವದಲ್ಲಿ ರಾಜ್ಯದ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ, ನ.13 ರಂದು ರಾಜ್ಯಮಟ್ಟದ ‘ಕೌಶಲ್ಯ–2025’ ಸಾಂಸ್ಕೃತಿಕ ಮತ್ತು ಮ್ಯಾನೇಜ್ಮೆಂಟ್ ಫೆಸ್ಟ್ ಏರ್ಪಡಿಸಲಾಗಿದೆ. 

ಮೊಬೈಲ್ ಫೋಟೋಗ್ರಫಿ, ಫ್ಯಾಷನ್ ಶೋ, ರಸಪ್ರಶ್ನೆ ಸೇರಿದಂತೆ 9 ವಿವಿಧ ಬಗೆಯ ಸಾಂಸ್ಕೃತಿಕ ಮತ್ತು ನಿರ್ವಹಣೆ ವಿಷಯಗಳ‌ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ, ನಾಯಕತ್ವ, ಸಂಘಟನಾ ಕೌಶಲ್ಯತೆ ಹಾಗೂ ನಿರ್ವಹಣಾ ಸಾಮರ್ಥ್ಯವನ್ನು ಉನ್ನತಿಕರಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.

ಆಸಕ್ತರು ತಮ್ಮ ತಂಡದ ನೊಂದಣಿಯನ್ನು ಡಾ. ಶಿವಪ್ರಸಾದ ಬಿ.ಎಸ್., ಪ್ರಾಂಶುಪಾಲರು, ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಮೊ. ಸಂ. 98441 77133), ಅರುಣ್ ಕುಮಾರ್ ಎಂ.ಎಸ್. ಕಾರ್ಯಕ್ರಮ ಸಂಯೋಜಕರು (ಮೊ. ಸಂ. 76769 32721) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

‘ಕೌಶಲ್ಯ – 2025’ ಕಾರ್ಯಕ್ರಮದ ಮಾಹಿತಿ ಕೈಪಿಡಿಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅನಾವರಗೊಳಿಸಿದರು. ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ನಿರ್ದೇಶಕರಾದ ಎಚ್.ಸಿ.ಶಿವಕುಮಾರ್, ಎಚ್.ಎನ್.ಸುಧೀರ್, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಪ್ರಾಂಶುಪಾಲರಾದ ಡಾ.ಶಿವಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *