
ಶಿವಮೊಗ್ಗ :- ಧರ್ಮ, ಸತ್ಯದ ಜಯವೇ ದಸರಾ ಆಚರಣೆ. ಅನ್ಯಾಯ ಎಷ್ಟು ಬಲಿಷ್ಠ ಆಗಿದ್ದರೂ ಸೊಲಲೇಬೇಕು. ನಮ್ಮ ಸಂಸ್ಕೃತಿಯ ಜೀವಂತಿಕೆಗೆ ಸಾಕ್ಷಿ ಎಂದು ನಿವೃತ್ತ ಉಪ ಸೇನಾ ದಂಡಾಧಿಕಾರಿ ಬಿ.ಎಸ್.ರಾಜು ಹೇಳಿದರು.
ಚಾಮುಂಡೇಶ್ವರಿ ಬೆಳ್ಳಿ ವಿಗ್ರಹವನ್ನು ಮಹಾನಗರ ಪಾಲಿಕೆ ಆವರಣದಿಂದ ನಗರದ ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಪ್ರತಿಷ್ಟಾಪನೆ ಮಾಡಲಾಯಿತು. ನಂತರ ಪಾಲಿಕೆಯ 11 ದಿನಗಳ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಬ್ಬಗಳ ಆಚರಣೆ. ಸಂಸ್ಕೃತಿ, ಶಿಸ್ತು, ತ್ಯಾಗವನ್ನಜ ಹಬ್ಬ ಕಲಿಸುತ್ತದೆ. ಮಲ್ಯ ಕಾಪಾಡಬೇಕು. ಹಬ್ಬಗಳಲ್ಲಿ ಶಿಸ್ತು ಪಾಲಿಸಬೇಕು. ಸ್ವಚ್ಛತೆ ಕಾಪಾಡಬೇಕು. ನಮ್ಮ ದೇಶ ಮುಂದೆ ಬರಲು ಸ್ವಚ್ಛತೆ ಬಹಳ ಮುಖ್ಯ ಎಂದರು.
ಸಿಂಗಾಪುರ್‌ನಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಾರೆ. ಸತ್ಯ, ಪ್ರಾಮಾಣಿಕತೆ, ಸೇವಾಭಾವ ನಿಜವಾದ ಆಚರಣೆ ಆಗಲಿ ಎಂದು ಆಶಿಸಿದರು.
ಆಪರೇಷನ್ ಸಿಂಧೂರ ಆದಾಗ ಭಾರತೀಯ ಸೇನೆ, ವಾಯುಪಡೆ ಮಾತ್ರ ಹೋಗಲ್ಲ. ಇಡೀ ದೇಶ ಹೋಗುತ್ತದೆ. ದೇಶ ಹಿಂದೆ ನೀವು ಇದ್ದಾಗ ಮಾತ್ರ ಗೆಲುವು ಖಚಿತ. 22 ತಿಂಗಳ ಹಿಂದೆ ನಿವೃತ್ತಿಯಾಗಿದ್ದೇನೆ. 50 ವರ್ಷಗಳ ಕಾಲ ಸಮವಸ್ತ್ರ ಧರಿಸಿದ್ದೇನೆ. ಪತ್ನಿಯ ಬೆಂಬಲ ಇದೆ. ಗಂಡಂದಿರು ಮುಂದೆ ಬರಲು ಪತ್ನಿಯ ಬೆಂಬಲ ಅತ್ಯಗತ್ಯ ಎಂದರು.

ಲೇಹ್ ಲಡಾಕ್‌ನಲ್ಲಿ ಮೊದಲ ಸೇವೆ ಸಲ್ಲಿಸಿದ್ದೇನೆ. ನಂತರ ಸಿಯಾಚಿನ್‌ನಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಮೈನಸ್ ಡಿಗ್ರಿ ಉಷ್ಣತೆ ಇರುತ್ತದೆ. ನಾಲ್ಕು ತಿಂಗಳ ಕಾಲ ಅಲ್ಲಿ ಇದ್ದೆವು. ಅವಕಾಶ ಸಿಕ್ಕಾಗ ನೀವೆಲ್ಲರೂ ಲೇಹ್ ಲಡಾಕ್ ನೋಡಿ ಬನ್ನಿ. ಕಾಶ್ಮೀರದ ಕೆಲಸ ಕೂಡ ತೃಪ್ತಿ ತಂದಿತು. ಮೈನಸ್ 50 ಡಿಗ್ರಿ ಮತ್ತು ಪ್ಲಸ್ 50 ಡಿಗ್ರಿ ಉಷ್ಣತೆಯಲ್ಲಿ ಕೆಲಸ ಮಾಡಿದ್ದೇನೆ ಎಂದರು.
ತಾಯಂದಿರು ಪೋಷಕರು ಮಕ್ಕಳು ಸೇನೆ ಸೇರುವ ಬಯಕೆ ಹೊಂದಿದ್ದರೆ ತಡೆಯಬೇಡಿ. ಅದೊಂದು ಅಪೂರ್ವ ಅವಕಾಶ ಎಂದರು.
ಶಂಕರಾನಂದ ಜೋಯ್ಸ್ ವೇದಘೋಷ ಮಾಡಿದರು. ಕಂದಾಯ ಅಧಿಕಾರಿ ನಾಗೇಂದ್ರ ಸ್ವಾಗತಿಸಿದರು. ಶಾಸಕ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಶಾಸಕರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಆಯುಕ್ತರಾದ ಮಾಯಣ್ಣ ಗೌಡ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಹೆಚ್.ಎಂ. ಮಧು, ಮಾಜಿ ಸದಸ್ಯರಾದ ಹೆಚ್.ಸಿ. ಯೋಗೀಶ್, ರೇಖಾ ರಂಗನಾಥ, ಜ್ಞಾನೇಶ್ವರ್, ಮೋಹನ್ ರೆಡ್ಡಿ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಗೋವಿಂದ, ಯಮುನಾ ರಂಗೇಗೌಡ, ಲಕ್ಷ್ಮಣ ಇನ್ನಿತರರು ಇದ್ದರು.
