google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನೀಯರ್‍ಸ್ ಮತ್ತು ಆರ್ಕಿಟೆಕ್ಟ್ಷ್ ಶಿವಮೊಗ್ಗ ಹಾಗೂ ಯು.ಎಸ್. ಕಮ್ಯೂನಿಕೇಷನ್ ಸಹಯೋಗದೊಂದಿಗೆ ಶುಭಮಂಗಳ ಸಮುದಾಯ ಭವನದಲ್ಲಿ ಸೆ. 19, 20 ಹಾಗೂ 21ರಂದು ಕಟ್ಟಡ ಸಾಮಗ್ರಿಗಳ, ಒಳ-ಹೊರ ವಿನ್ಯಾಸ ಮತ್ತು ಪೀಠೋಪಕರಣಗಳು, ಗೃಹ ಸಾಲ ಸೇರಿದಂತೆ ಹಲವಾರು ಸಾಮಗ್ರಿಗಳ ಎಸಿಇಎ-ಕಾನ್ 2025 ಎಂಬ ಬೃಹತ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರುದ್ರೇಶಪ್ಪ ಜಿ. ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಒಂದು ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳು ಮತ್ತು ಗೃಹ ಬಳಕೆಯ ಅಲಂಕಾರಿಕ ವಸ್ತುಗಳು ಒಂದೇ ಸೂರಿನಡಿಯಲ್ಲಿ ಪ್ರದರ್ಶನಗೊಳ್ಳುತ್ತವೆ ಎಂದ ಅವರು, ಕಟ್ಟಡ ನಿರ್ಮಾಣ ಕ್ಷೇತ್ರ ಬದಲಾಗುತ್ತಿರುವ ಈ ದಿನಗಳಲ್ಲಿ ಆಧುನಿಕ ನಿರ್ಮಾಣದ ಭರಾಟೆಯಲ್ಲಿ ನೂತನ ಸಾಮಗ್ರಿಗಳು ಮತ್ತು ತಾಂತ್ರಿಕ ಕೌಶಲ್ಯಗಳಿಂದ ಕೂಡಿದ ಹಲವು ಬಹುಪಯೋಗಿ ನಿರ್ಮಾಣ ಸಾಮಗ್ರಿಗಳ ಅರಿವನ್ನು ಸಾರ್ವಜನಿಕರಿಗೆ ಮೂಡಿಸುವುದು ಈ ವಸ್ತು ಪ್ರದರ್ಶನದಿಂದ ಸಹಾಯಕವಾಗಲಿವೆ. ಕಟ್ಟಡ ಹಾಗೂ ಮನೆ ನಿರ್ಮಿಸುವವರಿಗೆ ಸಾಮಗ್ರಿಗಳ ಬಗ್ಗೆ ಮಾಹಿತಿ ಒದಗಿಸುವ ಉದ್ಧೇಶದಿಂದ ಒಂದೇ ಸೂರಿನಡಿಯಲ್ಲಿ ಪ್ರದರ್ಶನ ಮತ್ತು ಮಾಹಿತಿ ಸಿಗಲಿದೆ ಎಂದರು.

ಸಾಮಾನ್ಯ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್, ಬ್ರಿಕ್ಸ್, ಅಗ್ರಿಗೇಟ್ ಎಂಸ್ಯಾಂಡ್, ಸ್ಟೀಲ್, ಫ್ಲಂಬಿಂಗ್, ಟೈಲ್ಸ್, ಪ್ಲೈವುಡ್, ಇಂಟೀರಿಯರ್ ಗೆ ಸಂಬಂಧಪಟ್ಟ ಪರಿಕರಗಳು, ಎಕ್ಷೀಟಿರಿಯರ್‍ಸ್ ಉತ್ಪನ್ನಗಳು, ಸೋಲಾರ್ ಮತ್ತು ಇಲೆಕ್ಟ್ರಿಕ್ ಉತ್ಪನ್ನಗಳು, ಅತ್ಯಾಧುನಿಕ ಗುಣಮಟ್ಟದ ಸೆಕ್ಯುರಿಟಿ ಉತ್ಪನ್ನಗಳು, ಯುಪಿವಿಸಿ ಡೋರ್ಸ ಮತ್ತು ವಿಂಡೋಸ್, ಪೈಂಟ್ ಮತ್ತು ಅಡೆಸ್ಸಿವ್, ವಾಟರ್ ಪ್ರೂಪಿಂಗ್ ಹೀಗೆ ಹತ್ತು ಹಲವಾರು ಉತ್ಪನ್ನಗಳು ವಿವಿಧ ನವನವೀನ ಕಲಾ ವಿನ್ಯಾಸಗಳು ನೋಡಲು ಸಿಗುತ್ತವೆ ಎಂದರು.

ಪ್ರತಿದಿನ ಬೆಳಿಗ್ಗೆ ೧೦.೩೦ರಿಂದ ರಾತ್ರಿ 8.30ರವರೆಗೆ ಪ್ರದರ್ಶನವಿದ್ದು ಸೆ. 19ರ ಮಧ್ಯಾಹ್ನ12 ಗಂಟೆಗೆ ಸಂಸದ ಬಿ.ವೈ.ರಾಘವೇಂದ್ರ ಪ್ರದರ್ಶನ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಆಗಮಿಸಲಿದ್ದಾರೆ. ಸೆ. 21ರ ಸಂಜೆ 5.30ಕ್ಕೆ ನಡೆಯುವ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕಿ ಶಾರದಾ ಪೂರ್ಯಾ ನಾಯ್ಕ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಹಾನಗರ ಪಾಲಿಕೆಯ ನಗರ ಯೋಜನಾ ಉಪನಿರ್ದೇಶಕಿ ಸಿ.ಕೆ.ರೂಪಾ ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ವೀರೇಂದ್ರಕುಮಾರ್, ಎಸ್.ಶರತ್, ಎನ್.ಕೆ.ಶಿವಾನಂದ, ಅನಿಲ್ ಕುಮಾರ್ ಜೋಯಿಸ್, ಅವಿನಾಶ್ ಎಂ., ಸಂಚಾಲಕ ಉಮಾಪತಿ ಇದ್ದರು.

Leave a Reply

Your email address will not be published. Required fields are marked *