ಶಿವಮೊಗ್ಗ :- ಭಾರತದ ಅತ್ಯಂತ ಪ್ರತಿಷ್ಠಿತ ಆಭರಣ ಕಂಪನಿಗಳಲ್ಲಿ ಒಂದಾದ ಬೆಂಗಳೂರಿನ ಹೆಸರಾಂತ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ವತಿಯಿಂದ ನಗರದ ರಾಯಲ್ ಆರ್ಕೆಡ್‌ನಲ್ಲಿ ಇಂದಿನಿಂದ ವಜ್ರ, ಪ್ಲಾಟಿನಂ, ಚಿನ್ನ, ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಕಂಪನಿಯ ಸ್ಟೋರ್ ಮ್ಯಾನೇಜರ್ ಕೆ.ಕೆ. ಪ್ರಸಾದ್ ಮಾತನಾಡಿ, ಕೃಷ್ಣಯ್ಯ ಚೆಟ್ಟಿ ಆಭರಣ ಸಂಸ್ಥೆಯು 1869ರಿಂದಲೇ ಜನರ ನಂಬಿಕೆಗೆ ಪಾತ್ರವಾಗಿ ಆಭರಣಗಳ ತಯಾರಿಸಿ, ಮಾರಾಟ ಮಾಡುತ್ತಾ ಬಂದಿದೆ. ಕಾಲಾತೀತ ಸಂಪ್ರದಾಯ ಮತ್ತು ಅತ್ಯಾಧುನಿಕತೆಯ ಸಮ್ಮಿಲನದ ಆಭರಣಗಳ ವಿಶೇಷ ಮಾರಾಟ ಪ್ರದರ್ಶನದೊಂದಿಗೆ ನಾಲ್ಕು ದಿನಗಳ ಕಾಲ ಶಿವಮೊಗ್ಗವನ್ನು ಬೆರಗುಗೊಳಿಸಲು ಸಜಗಿದೆ. ಈ ಮಾರಾಟ ಪ್ರದರ್ಶನವು ಆಗಸ್ಟ್ 29 ರಿಂದ ಸೆಪ್ಟೆಂಬರ್ 10, 2025ರವರೆಗೆ ಶಿವಮೊಗ್ಗದ ಹೋಟೆಲ್ ರಾಯಲ್ ಆರ್ಕಿಡ್ ಸೆಂಟ್ರಲ್‌ನಲ್ಲಿ ಬೆಳ್ಳಿಗ್ಗೆ 10.30ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ ಎಂದರು.
ಈ ಪ್ರದರ್ಶನವು ಪ್ರಕಾಶಮಾನವಾದ ಮುತ್ತುಗಳು, ರಾಜಮನೆತನದ ಪಚ್ಚೆಗಳು ಮತ್ತು ಶುಭ್ರವಾದ ಮಾಣಿಕ್ಯಗಳಿಂದ ಎದ್ದುಕಾಣುವ ವೈಡೂರ್ಯ, ಹೊಳೆಯುವ ಸಿಟ್ರಿನ್ ಮತ್ತು ಅದ್ಭುತ ವಜ್ರಗಳವರೆಗೆ ಶುದ್ಧ ಚಿನ್ನ, ಅಪರೂಪದ ರತ್ನಗಳು ಮತ್ತು ನವೀನ ವಿನ್ಯಾಸಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ರತ್ನವನ್ನು ಕ್ಲಾಸಿಕ್ ಸೊಬಗಿನಿಂದ ಇಂದಿನ ಸಮಕಾಲೀನ ಅಲಂಕಾರಗಳವರೆಗೆ ಪ್ರತಿಯೊಂದು ಶೈಲಿಗೆ ಪೂರಕವಾಗುವಂತೆ ಎಚ್ಚರಿಕೆಯಿಂದ ರಚಿಸಲಾಗಿದೆ ಎಂದರು.
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಶಿವಮೊಗ್ಗದಲ್ಲಿ ಪ್ರತಿ ಬಾರಿ ಪ್ರದರ್ಶನ ಏಪರ್ಡಿಸಿದಾಗಲೂ, ಇಲ್ಲಿನ ಜನರ ಪ್ರತಿಕ್ರಿಯೆ ನಿಜವಾಗಿಯೂ ಅಗಾಧವಾಗಿದೆ ಮತ್ತು ಇದು ಮತ್ತೆ ಮತ್ತೆ ಮರಳಿ ಬರಲು ನಮಗೆ ಸ್ಫೂರ್ತಿ ನೀಡುತ್ತದೆ. ಇಂತಹ ಇನ್ನೂ ಅನೇಕ ಪ್ರದರ್ಶನಗಳನ್ನು ಮತ್ತು ಇಲ್ಲಿ ನಮ್ಮ ಗ್ರಾಹಕರೊಂದಿಗೆ ಶಾಶ್ವತ ಸಂಬಂಧಗಳನ್ನು ಬೆಳೆಸಲು ನಾವು ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ ಎಂದರು.
ಬೆಂಗಳೂರಿನ ಪ್ಯಾಲೇಸ್‌ಗ್ರೌಂಡ್‌ನಲ್ಲಿ ವಿವಾಹ ಮಹೋತ್ಸವವನ್ನು ಆಹ್ವಾನಿಸುವವರು ನಮ್ಮ ಸಂಸ್ಥೆಯಲ್ಲಿ ಏಳು ಲಕ್ಷ ರೂ. ಆಭರಣಗಳನ್ನು ಕೊಂಡರೆ, ಮತ್ತು ಅಲ್ಲಿ 8 ಲಕ್ಷ ರೂ. ಪಾವತಿ ಮಾಡಿದರೆ 250 ಜನರಿಗೆ ಊಟದ ಏರ್ಪಾಡು, ಡೆಕೋರೇಷನ್ ಮಾಡಿಕೊಡಲಾಗುವುದು. ಶಿವಮೊಗ್ಗದಲ್ಲಿಯೂ ಸಹ ಈ ಯೋಜನೆಯನ್ನು ಜರಿಗೊಳಿಸುವ ಯೋಚನೆ ಇದೆ ಎಂದರು.
ಶಿವಮೊಗ್ಗದ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿಲ್ಲ-ಇದು ಕಲಾತ್ಮಕತೆ, ಪರಂಪರೆ ಮತ್ತು ಬ್ರ್ಯಾಂಡ್ನ ಉದ್ದೇಶವನ್ನು ಒಟ್ಟಾಗಿಸುವ ವೇದಿಕೆಯಾಗಿದೆ, ಇಲ್ಲಿ 155 ವರ್ಷಗಳಷ್ಟು ಹಳೆಯ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಭರಣಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಗ್ರಾಹಕರು ವೀಕ್ಷಿಸುತ್ತಾರೆ’ ಎಂದರು. ಹೆಚ್ಚಿನ ಮಾಹಿತಿಗೆ ಗೋಪಾಲ್ ಸಿಂಗ್, ಮೊ. 97400 18421ರಲ್ಲಿ ಸಂಪರ್ಕಿಸಬಹುದು. ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಗೋಪಾಲ್ ಸಿಂಗ್, ತೇಜಸ್ ಇದ್ದರು.
ಶಿವಮೊಗ್ಗ ಗ್ರಾಹಕರಿಗೆ ಮಾತ್ರ ವಿಶೇಷ ಕೊಡುಗೆಗಳು
ಬೆಳ್ಳಿ ಆಭರಣಗಳ ಮೇಲೆ 2% ರಿಯಾಯಿತಿ, ಚಿನ್ನದ ಆಭರಣಗಳ ಮೇಲೆ 4% ರಿಯಾಯಿತಿ, ವಜ್ರದ ಆಭರಣಗಳ ಮೇಲೆ 6% ರಿಯಾಯಿತಿ, 18.69 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮಲ್ಯದ ವಜ್ರದ ಆಭರಣಗಳ ಖರೀದಿಗಳ ಮೇಲೆ 9% ರಿಯಾಯಿತಿ ಇರುತ್ತದೆ.