ಶಿವಮೊಗ್ಗ :- ನಗರದ ಫ್ರೀಡಂ ಪಾರ್ಕ್ ಬಳಿ ಇರುವ ಬೃಹತ್ಗಾತ್ರದ ಮರವೊಂದು ಇಂದು ಬೆಳಿಗ್ಗೆ ಬುಡಸಮೇತ ಧರೆಗೆ ಉರುಳಿಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಫ್ರೀಡಂ ಪಾರ್ಕ್ ಮೂಲೆಯ ಟ್ರಾಫಿಕ್ ಎದುರಿರುವ ೨ನೇ ಅತೀ ದೊಡ್ಡ ಮರ ಧರೆಗುರುಳಿದೆ. ಈ ಸ್ಥಳದಲ್ಲೇ ಟ್ರಾಫಕ್ ದೀಪಗಳಿದ್ದ ವಾಹನಗಳು ನಿಲುಗಡೆಗೊಳ್ಳುತ್ತವೆ. ಆಕ್ಷಣದಲ್ಲಿ ಟ್ರಾಫಿಕ್ ಬಿಟ್ಟಿತ್ತು ಎನ್ನಲಾಗಿದೆ. ವಾಹನಗಳು ನಿಂತಿದ್ದರೆ ಭಾರಿ ಅನಾಹುತ ಸಂಭವಿಸಿ, ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇತ್ತು ಸ್ಥಳೀಯರು ಎನ್ನುತ್ತಿದ್ದರು.
ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕದಳ, ಮಹಾನಗರ ಪಾಲಿಕೆಯ ಸಿಬ್ಬಂಧಿಗಳು ಹಾಗೂ ಸಂಚಾರಿ ಪೊಲೀಸರು ಮರವನ್ನು ತೆರವುಗೊಳಿಸುವ ಕಾರ್ಯ ನಡೆಸಿತು. ಒಟ್ಟಾರೆ ಅದೃಷ್ಟುವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.