ಶಿಕಾರಿಪುರ :- ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ನಿಮಿತ್ತ ಫೆ. 20ರ ನಾಳೆ ಹಾಗೂ 21ರಂದು ಪಟ್ಟಣದ ಕುಮದ್ವತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಲಾದ ಬೃಹತ್ ಉದ್ಯೋಗ ಮೇಳದಲ್ಲಿ ಸೌದಿ ಅರೇಬಿಯಾದ ಕಂಪನಿ ಸಹಿತ ಹೆಸ ರಾಂತ 83 ಕ್ಕೂ ಅಧಿಕ ಕಂಪನಿಗಳು ಪಾಲ್ಗೊಳ್ಳಲಿದ್ದು ಈ ದಿಸೆಯಲ್ಲಿ ನೋಂದಾಯಿತ ಅಭ್ಯರ್ಥಿಗಳಿಗೆ 5ತರಬೇತಿ ಶಿಬಿರದ ಮೂಲಕ ಸಜ್ಜುಗೊಳಿಸಲಾಗಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಶನ್ ಟ್ರಸ್ಟ್ ನ ವಿವೇಕ್ ಆಳ್ವಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ಪ್ರಗತಿ ಮೂಲಕ ಈಗಾಗಲೇ ದೇಶದ ಹಲವೆಡೆ ಆಯೋಜಿಸಲಾದ ಉದ್ಯೋಗ ಮೇಳದಲ್ಲಿ 36ಸಾವಿರಕ್ಕೂ ಅಧಿಕ ಪ್ರತಿಭಾನ್ವಿತರಿಗೆ ಉದ್ಯೋಗ ದೊರಕಿಸಿಕೊಡಲಾಗಿದೆ.ವಿವಿಧ ಕಂಪನಿಯ ಜತೆಗೆ ಗುಂಪು ಚರ್ಚೆ,ಕಂಪ್ಯೂಟರ್, ಲಿಖಿತ ಪರೀಕ್ಷೆ ಮತ್ತಿತರ ಹಲವು ವಿಧಾನದ ಮೂಲಕ ನಡೆಯಲಿರುವ ಆಯ್ಕೆಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಪ್ರಭಾವಕ್ಕೆ ಆಸ್ಪದವಿಲ್ಲದೆ ಅರ್ಹತೆಗೆ ಅನುಗುಣವಾಗಿ ನಡೆಯಲಿರುವ ಆಯ್ಕೆ ಬಗ್ಗೆ ಈಗಾಗಲೇ ಆನ್ ಲೈನ್ ಮೂಲಕ ನೋಂದಾಯಿತ 2ಸಾವಿರ ಅಧಿಕ ಅಭ್ಯರ್ಥಿಗಳಲ್ಲಿ ಬಹುತೇಕ ಅಭ್ಯರ್ಥಿಗಳಿಗೆ 5ತರಬೇತಿ ಶಿಬಿರದ ಮೂಲಕ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಅಭ್ಯರ್ಥಿ ಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಆಯೋಜಿಸಲಾದ ಉದ್ಯೋಗ ಮೇಳದ ಅಂತಿಮ ಹಂತದ ಸಿದ್ದತೆ ಬಹುತೇಕ ಪೂರ್ಣಗೊಂಡಿದ್ದು ಎಸ್ ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ,ತಾಂತ್ರಿಕ ಪದವಿ,ಆರೋಗ್ಯ ವೈದ್ಯಕೀಯ ಪದವಿ ಸಹಿತ ಎಲ್ಲ ಅಭ್ಯರ್ಥಿಗಳ ಜತೆಗೆ ಅನಕ್ಷರಸ್ಥರೂ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಉತ್ಪಾದನಾ ಸಂಸ್ಥೆ,ಹಣಕಾಸು ಸಂಸ್ಥೆ,ಶಿಕ್ಷಣ ಸಂಸ್ಥೆ, ಐಟಿ ಸಹಿತ ವೈದ್ಯಕೀಯ ಕ್ಷೇತ್ರದ 83ಕ್ಕೂ ಅಧಿಕ ಹೆಸರಾಂತ ಕಂಪನಿಗಳು ಪಾಲ್ಗೊಳ್ಳ ಲಿದ್ದು ಆಯ್ಕೆಯಾದ ಅಭ್ಯರ್ಥಿಗಳ ಜತೆ 2ತಿಂಗಳ ಸತತ ಸಂಪರ್ಕದಲ್ಲಿರು ವುದಾಗಿ ತಿಳಿಸಿದರು. ಪ್ರಾಚಾರ್ಯರಾದ ಡಾ. ಶಿವಕುಮಾರ್, ಡಾ. ವೀರೇಂದ್ರ ಗೌಡ, ವಿದ್ಯಾಶಂಕರ್ ಇದ್ದರು.