
ಶಿವಮೊಗ್ಗ :- ‘ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಹೊಸ ಆಟೋರಿಕ್ಷಾ ಗಳಿಗೆ ಪರವಾನಿಗೆ ನೀಡುತ್ತಿರುವು ದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸ ಬೇಕು’ ಎಂದು ಒತ್ತಾಯಿಸಿ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರ ವ್ಯಾಪ್ತಿಯಲ್ಲಿ ಆಟೋರಿಕ್ಷ ಗಳ ಸಂಖ್ಯೆ ಅಧಿಕವಾಗಿ ಆಟೋ ಚಾಲಕರ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಇದೇ ಕಾರಣಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ನೀಡುತ್ತಿದ್ದ ಪರವಾನಿಗೆಯನ್ನು ಈ ಹಿಂದಿನ ಜಿಲ್ಲಾಧಿಕಾರಿ ಸ್ಥಗಿತಗೊಳಿಸಿ ದ್ದರು. ೨೦೨೪ರಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಇಲಾಖೆ ಯಿಂದ ನೋಂದಣಿಗೊಂಡು ಪರವಾನಿಗೆ ಇಲ್ಲದೇ ಚಲಾಯಿ ಸುತ್ತಿದ್ದ ೨೭೩ ಆಟೋರಿಕ್ಷ ಗಳಿಗೆ ಮಾತ್ರ ಪರವಾನಿಗೆ ನೀಡು ವಂತೆ ಸಭೆಯಲ್ಲಿ ಅನುಮೋದಿಸ ಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಇಲಾಖೆಯು ೨೦೨೪ ರಿಂದ ಇಲ್ಲಿಯವರೆಗೆ ಹೊಸ ಆಟೋರಿಕ್ಷಾಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪರವಾನಿಗೆ ನೀಡಿದ ಕಾರಣ ನಗರ ವ್ಯಾಪ್ತಿಯಲ್ಲಿ ಆಟೋರಿ ಕ್ಷಗಳ ಸಂಖ್ಯೆಯು ಅಧಿಕಗೊಂಡು ಬೇಡಿಕೆ ಮತ್ತು ಪೂರೈಕೆಯ ವ್ಯತ್ಯಾಸ ಉಂಟಾಗಿದ್ದು, ಆಟೋ ಚಾಲಕರಿಗೆ ದಿನನಿತ್ಯದ ದುಡಿಮೆಯ ಪ್ರಮಾಣವು ಕಡಿಮೆಯಾಗಿ ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ ಎಂದು ದೂರಿದರು.
ಬ್ಯಾಂಕು ಮತ್ತು ಫೈನಾನ್ಸ್ ಗಳಿಂದ ಪಡೆದಂತಹ ಸಾಲವನ್ನು ಸರಿಯಾದ ಸಮಯದಲ್ಲಿ ಮರು ಪಾವತಿ ಮಾಡಲಾಗದೆ, ಸಾಕಷ್ಟು ಆಟೋ ರಿಕ್ಷಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಿಲ್ಲಾಡಳಿತವು ಆಟೋ ಚಾಲಕರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿ ಗಣಿಸಬೇಕೆಂದು ಒತ್ತಾಯಿಸಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್, ಗೌರ ಅಧ್ಯಕ್ಷ ಅನ್ಸರ್, ಆಲ್ಲಾ ಬಕಾಷ್, ಪ್ರಶಾಂತ್, ಇಕ್ಬಾಲ್ ಇನ್ನಿತರರಿದ್ದರು.