

ಶಿವಮೊಗ್ಗ :- ರೈಲಿನ ಇಂಜಿನ್ ಮತ್ತು ಭೊಗಿ ಬೇರೆಯಾಗಿ ಭಾರಿ ಅನಾಹತ ವೊಂದು ತಪ್ಪಿದ ಘಟನೆ ಇಂದು ಸಂಜೆ ತುಂಬಿ ಹರಿಯುತ್ತಿರುವ ತುಂಗಾ ನದಿಯ ಸೇತುವೆ ಪಕ್ಕದಲ್ಲಿ ನಡೆದಿದೆ.
ಮೈಸೂರಿನಿಂದ ಶಿವಮೊಗ್ಗ ರೈಲ್ವೆ ಸ್ಟೇಷನ್ ತಲುಪಿ ನಂತರ ತಾಳಗುಪ್ಪಕ್ಕೆ ಪ್ರತಿದಿನ ಸಾಗುವ ಮೈಸೂರು-ತಾಳಗುಪ್ಪ ಟ್ರೈನ್ ನ ಭೊಗಿಯ ಕೊಂಡಿ ತುಂಗಾ ಸೇತುವೆ ಪಕ್ಕದ ಹೊಳೆ ಬಸ್ ಸ್ಟಾಪ್ ಬಳಿಯೇ ಕಳಚಿ ಪ್ರಯಾಣಿಕರಿಗೆ ಭಯ ಹುಟ್ಟಿಸಿದೆ.
ಶಿವಮೊಗ್ಗ ನಗರದಲ್ಲಿ ಈ ರೀತಿಯ ಘಟನೆ ಮೊದಲನೆದಾಗಿದೆ. ಘಟನೆ ನಡೆಯುತ್ತಿದ್ದಂತೆ ಸಾರ್ವಜನಿಕರ ಜಮಾವಣೆಯಾಗಿದೆ. ಕೂಡಲೆ ರೈಲ್ವೆ ಸಿಬ್ಬಂಧಿಗಳು ಸ್ಥಳಕ್ಕೆ ಭೆಟಿ ನೀಡಿ ಭೊಗಿ ಮತ್ತಿ ಇಂಜಿನ್ ಕೊಂಡಿ ಸರಿಪಡಿಸಿ ಜೋಡಿಸಿದ್ದಾರೆ.
ಸುಮಾರು 45 ನಿಮಿಷ ನಿಂತ ರೈಲು :
ರೈಲಿನ ಇಂಜಿನ್ ಕೊಂಡಿ ಕಳಚುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ತೀವ್ರ ಗಾಭರಿಯಾಗಿದ್ದಾರೆ. ಇದರಿಂದಾಗಿ ರೈಲು ಸುಮಾರು ಮುಕ್ಕಾಲು ತಾಸು ನಿಂತು ರಿಪೇರಿಯಾಗಿ ಪ್ರಯಾಣ ಮುಂದುವರೆಸಿದೆ.