
ಶಿವಮೊಗ್ಗ :- ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಬಿ ಬ್ಲಾಕ್‌ನಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು ಮತ್ತು ಇಲ್ಲಿರುವ ಪಾರ್ಕ್‌ನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಇಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಬೊಮ್ಮನಕಟ್ಟೆ ಆಶ್ರಯಬಡಾವಣೆಯ ಎ ಮತ್ತು ಬಿ ಬ್ಲಾಕ್‌ನಲ್ಲಿ ಗುಡಿಸಲು ಮತ್ತು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಸರ್ಕಾರದ ನಿಯಮಾನುಸಾರ ಸರ್ವೇಕಾರ್ಯ ಮಾಡಿ, ಹಕ್ಕುಪತ್ರ ನೀಡಬೇಕು. ಮಹಾನಗರ ಪಾಲಿಕೆಯವರು ಈಗಾಗಲೇ ಇಲ್ಲಿನ ನಿವಾಸಿಗಳಿಗೆ ನೋಟೀಸು ನೀಡುತ್ತಿದ್ದಾರೆ. ಹಕ್ಕುಪತ್ರಕ್ಕಾಗಿ ಹಲವು ಬಾರಿ ಹೋರಾಟ ಮಾಡಿದ್ದೇವೆ. ಆದರೂ ಕೂಡ ಇದೂವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಈಗಲಾದರೂ ನಮಗೆ ಹಕ್ಕುಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಹಾಗೆಯೇ ಬಿ ಬ್ಲಾಕ್‌ನಲ್ಲಿ ಪಾರ್ಕ್ ಇದ್ದು, ೪ ವರ್ಷದ ಹಿಂದೆ ಇದನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಈಗ ಅಲ್ಲಿ ಗಿಡಗಂಟಿಗಳು ಬೆಳೆದು, ಸಂಪೂರ್ಣ ಹಾಳಾಗಿದೆ ಅನೈತಿಕ ಚಟುವಟಿಕೆಗಳಿಗೂ ಕಾರಣವಾಗಿದೆ. ಕೂಡಲೇ ಈ ಪಾರ್ಕನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಂತೋಷ್ ನಾಯಕ್, ತಿಪ್ಪೇಶ್ ನಾಯಕ್ ಹಾಗೂ ಅಲ್ಲಿನ ನಿವಾಸಿಗಳಾದ ವಿಶಾಲಬಾಯಿ, ಗೀತ, ಅಂಬಿಕಾ, ಮಂಜಮ್ಮ, ಮಮ್ತಾಜ್, ಪುಷ್ಪ, ಸುಮಲತಾ, ಪಾರ್ವತಮ್ಮ ಸೇರಿದಂತೆ ಹಲವರಿದ್ದರು.