google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- 1975ರಲ್ಲಿ ಭಾರತ ಎದುರಿಸಿದ ಸಂವಿಧಾನ ವಿರೋಧಿ ತುರ್ತು ಪರಿಸ್ಥಿತಿಯ ಅಧ್ಯಾಯಕ್ಕೆ ೫೦ ವರ್ಷಗಳು ಸಂದ ಸ್ಮರಣೆಯಲ್ಲಿ ಶಿವಮೊಗ್ಗದ ಶ್ರೀಗಂಧ ಸಂಸ್ಥೆ ಹಾಗೂ ಮಂಥನ ಟ್ರಸ್ಟ್ ಆಶ್ರಯದಲ್ಲಿ ಕರಾಳ ಅಧ್ಯಾಯ-50 ವರ್ಷ ಎಂಬ ವಿಶೇಷ ಬಹಿರಂಗ ಸಭೆಯನ್ನು ಜು. 25ರ ಸಂಜೆ 5.30ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀಗಂಧ ಸಂಸ್ಥೆಯ ಖಜಂಚಿ ಕೆ.ಈ. ಕಾಂತೇಶ್ ತಿಳಿಸಿದರು.

ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಸಭೆಯಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಯ ಶಿಕ್ಷೆ ಅನುಭವಿಸಿದ ಶಿವಮೊಗ್ಗದ ಹಿರಿಯ ನಾಗರೀಕರಿಗೆ ಗೌರವ ಸಮರ್ಪಿಸಲಾಗುವುದು ಹಾಗೂ ದೇಶಕ್ಕಾಗಿ ಜೀವನ ಮುಡುಪಿಟ್ಟು ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರನ್ನು ಸನ್ಮಾನಿಸಲಾಗುವುದು ಎಂದ ಅವರು, ತುರ್ತು ಪರಿಸ್ಥಿತಿಯ50 ವರ್ಷದ ಸ್ಮರಣೆಗಾಗಿ ಶಿವಮೊಗ್ಗ ನಗರದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಳೆದವಾರ ನಡೆದ ದೇಶಭಕ್ತಿಗೀತೆಯ ಸಮೂಹ ಗಾಯನ ಸ್ಫರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮತ್ತು ವಿಜೇತ ತಂಡಗಳಿಂದ ದೇಶಭಕ್ತಿಗೀತೆಗಳ ಸಮೂಹ ಗಾಯನ ನಡೆಯಲಿದೆ ಎಂದರು.

ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಮಾತನಾಡಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಯ ಶಿಕ್ಷೆ ಅನುಭವಿಸಿದ ಶಿವಮೊಗ್ಗದ ಹಿರಿಯರು ಹಾಗೂ ಎಂ.ಎ.ಡಿ.ಬಿ. ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಖ್ಯಾತವಾಗ್ಮಿ ಹಾಗೂ ಸಾಹಿತಿ ಜಿ.ಬಿ. ಹರೀಶ್ ಮುಖ್ಯ ಭಾಷಣ ಮಾಡಲಿದ್ದು, ಅಜೇಯ ಖ್ಯಾತಿಯ ಲೇಖಕ ಹಾಗೂ ಹಿರಿಯ ಸಾಹಿತಿ, ರಾಷ್ಟ್ರವಾದಿ ಚಿಂತಕ ಬಾಬು ಕೃಷ್ಣಮೂರ್ತಿ ಅವರನ್ನು ನಗರದ ಸಮಸ್ತ ದೇಶಭಕ್ತ ನಾಗರೀಕರ ಪರವಾಗಿ ಸನ್ಮಾನಿಸಲಾಗುವುದು. ಮಂಥನ ಟ್ರಸ್ಟ್‌ನ ಟ್ರಸ್ಟಿ ವಾಸುದೇವ್, ಶ್ರೀಗಂಧ ಸಂಸ್ಥೆಯ ಖಜಂಚಿ ಕೆ.ಈ. ಕಾಂತೇಶ್ ಉಪಸ್ಥಿತರಿರುವರು ಎಂದರು.

ದೇಶದ ಇತಿಹಾಸವನ್ನು ಅವಲೋಕಿಸುವ ಮತ್ತು ದೇಶಭಕ್ತಿಯನ್ನು ಜಗೃತಿಗೊಳಿಸುವ ಈ ಅಪರೂಪದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಉಮೇಶ್ ಆರಾಧ್ಯ, ಟಿ.ಆರ್. ಅಶ್ವತ್ಥ್‌ನಾರಾಯಣ ಶೆಟ್ಟಿ, ಕುಬೇರಪ್ಪ, ರಾಜು, ಹರೀಶ್ ಪುರಾಣಿಕ್, ಶ್ರೀಕಾಂತ್, ಜದವ್, ಕಾಚಿನಕಟ್ಟೆ ಸತ್ಯನಾರಾಯಣ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *