
ಹೊಸನಗರ:- ತಾಲೂಕಿನ ಯಡೂರು ಬಳಿಯಿರುವ ಅಬ್ಬೆ ಫಾಲ್ಸ್ ನಲ್ಲಿ ಪ್ರವಾಸಿಗರೊಬ್ಬರು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೆ ಅರಣ್ಯ ಇಲಾಖೆ ಫಾಲ್ಸ್ ಪ್ರವೇಶ ದಾರಿಗೆ ಬೇಲಿ ಹಾಕಿದೆ.ಅಲ್ಲದೆ ಜಲಪಾತಕ್ಕೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಹಿಂದೆ ಅರಣ್ಯ ಇಲಾಖೆ ಇಲ್ಲಿ ಪ್ರವೇಶ ನಿಷೇಧಿಸಿ, ಟ್ರೆಂಚ್‌ಗಳನ್ನು ನಿರ್ಮಿಸಿತ್ತು ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಿತ್ತು. ಹಾಗಿದ್ದರೂ ಪ್ರವಾಸಿಗರು ಇಲ್ಲಿಗೆ ತೆರಳುತ್ತಿದ್ದರು. ಈ ನಡುವೆ ಬೆಂಗಳೂರು ಮೂಲದ ರಮೇಶ್ (೩೫) ಎಂಬ ಯುವಕ ನೀರಿನಲ್ಲಿ ಆಡುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದರು.
ಇದರ ಬೆನ್ನಲ್ಲೆ ಜಲಪಾತಕ್ಕೆ ಹೋಗುವ ದಾರಿಗೆ ಬೇಲಿಯನ್ನು ಅಳವಡಿಸಿ ಪ್ರವೇಶ ವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಅಕ್ರಮವಾಗಿ ಅಬ್ಬಿ ಫಾಲ್ಸ್ ಪ್ರವೇಶಿಸಲು ಪ್ರಯತ್ನಿಸಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬ್ಯಾನರ್ ಕಟ್ಟಿ ಎಚ್ಚರಿಕೆ ನೀಡಿದೆ. ಪ್ರವಾಸಿಗರು ನಿಯಮವನ್ನು ಪಾಲಿಸುವಂತೆ ಕೋರಲಾಗಿದೆ.
