google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಮಂಜೂರು ಮಾಡಲು ಅಧಿಕಾರಿ ಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ಇಂದು ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯ ಗಿರೀಶ್ ಎಸ್. ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ಸುಮಾರು 30-40 ವರ್ಷಗಳಿಂದ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ರೈತರು 1990- 1991,1998-99 ರವರೆಗೆ ಫಾರಂ ನಂಬರ್ 50 ,53 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಈಗಾಗಲೇ ಬಗರ್ ಹುಕುಂ ಸಮಿತಿ ರಚನೆಯಾಗಿದ್ದು ಉಪ ವಿಭಾಗಾಧಿಕಾರಿಗಳು ಮೇಲ್ಮನವಿಯಲೂ ಸಹ ಅನುಮತಿಯನ್ನು ಪಡೆದಿದ್ದು ಸದರಿ ಅನುಮತಿ ಪತ್ರ ಗ್ರಾಮ ಲೆಕ್ಕಾಧಿಕಾರಿಗಳ ವರದಿಗೆ ಹೋದ ನಂತರ ವರದಿ ನೀಡದೆ ಸಲ್ಲದ ನೆಪ ಒಡ್ಡಿ ನಿರಾಕರಿಸುತ್ತಿದ್ದಾರೆಂದು ದೂರಿದ್ದಾರೆ.

ಸರ್ಕಾರದ ಸುತ್ತೋಲೆಯಂತೆ ಫಾರಂ-57ರಡಿಯ ಲ್ಲಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಮಾತ್ರ 10 ಕಿ.ಮೀ. ನಗರ ವ್ಯಾಪ್ತಿ ಇರುವುದರಿಂದ ವರದಿ ನೀಡಬಾರದೆಂದು ಸರ್ಕಾರದ ಆದೇಶವಿದೆ ಈ ಆದೇಶವು ೫೦,೫೩ಅರ್ಜಿಗೆ ಅನ್ವಯಿಸುವುದಿಲ್ಲ. ಹಾಗೂ ಈ ಹಿಂದೆ ಸರ್ವೇ ಇಲಾಖೆ ಯವರು ನೀಡಿದ ವರದಿಯು ಅವೈಜನಿಕವಾಗಿದ್ದು,ವರದಿಯನ್ನು ಪುನರ್ ಪರಿಶೀಲಿಸಿ ಹಾಗೂ 50, 53ಅರ್ಜಿಯನ್ನು ಪರಿಗಣಿಸಿ ರೈತರಿಗೆ ಸಾಗುವಳಿ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕಾಗಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖ ರಾದ ಕಲಗೋಡು ರತ್ನಾಕರ್ ನಾಗೇಂದ್ರಪ್ಪ, ಸೋಗಾನೆ ಕೃಷ್ಣಪ್ಪ, ಪ್ರವೀಣ್, ಮಧು ಸೂಧನ್, ವೇಲು ಕಲ್ಲಾಪುರ, ಮಂಜಣ್ಣ, ವೆಂಕಟೇಶ್, ಕಟೀಕೆರೆ ಹುಚ್ಚಪ್ಪ, ಮಂಜುನಾಥ್, ಸಂಜಯ್, ಮಂಜನಾಯ್ಕ್ ಕಲ್ಲಾಪುರ, ಹರೀಶ್ ನಾಯ್ಕ ನಿದಿಗೆ ಕುಮಾರ್ ಹಲವರಿದ್ದರು.

Leave a Reply

Your email address will not be published. Required fields are marked *