ಶಿವಮೊಗ್ಗ :- ಮೆಗ್ಗಾನ್ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳಿವೆ. ಇಲ್ಲಿನ ಮೆಡಿಕಲ್ ಶಾಪ್ ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಮಾತ್ರ ಇರುತ್ತದೆ. ಆನ್‌ಲೈನ್ ವ್ಯವಸ್ಥೆಯಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಸಂಜೆ 4.30ರ ನಂತರ ವೈದ್ಯರು ಮಾತ್ರೆ ಬರೆದುಕೊಡುತ್ತಾರೆ. ಆಗ ಹೊರಗಡೆಯೇ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಬಡ ರೋಗಿಗಳಿಗೆ ಕಷ್ಟವಾಗುತ್ತದೆ. ಉಚಿತವಾಗಿ ಮಾತ್ರೆಗಳು ಸಿಗುತ್ತವೆ ಎಂದರೆ ಹಾಗಾಗುವುದಿಲ್ಲ ಎಂದು ದೂರಿದರು.
ಅಲ್ಲದೇ, ಬಿಪಿಎಲ್ ಪಡಿತರ ಚೀಟಿ ತಂದು ತಪಾಸಣೆ ಮಾಡಿಸಲು ಬಂದರೆ ಬಿಲ್ ಕಟ್ಟಿ ರಶೀದಿ ತೆಗೆದುಕೊಳ್ಳಿ ಎಂದು ಹೇಳಿ ಹಣವನ್ನು ಪಾವತಿಸಿಕೊಂಡು ತಪಾಸಣೆ ಮಾಡುತ್ತಾರೆ. ಖಾಸಗಿ ಆಸ್ಪತ್ರೆಗೆ ಹೋದಂತೆ ಆಗುತ್ತದೆ. ರೋಗಿಗಳನ್ನು ನೋಡಲು ಕೂಡ ಬಿಡುವುದಿಲ್ಲ. ಹೀಗಾಗಿ ಹಲವು ಸಮಸ್ಯೆಗಳು ಇಲ್ಲಿವೆ. ಇವುಗಳನ್ನೆಲ್ಲಾ ಪರಿಶೀಲಿಸಿ ಆಸ್ಪತ್ರೆಯ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಕನ್ನಡ ಮುರುಳಿ ಗಿರೀಶ್, ಅನಿಲ್,. ಹರೀಶ್, ಮುರುಗನ್, ಸುಜಿತ್, ಅಮಿತ್, ಪರಮೇಶ್, ಮುಂತಾದವರಿದ್ದರು.