google.com, pub-9939191130407836, DIRECT, f08c47fec0942fa0

ಸೊರಬ :- ತಂತಿಯ ಮೇಲೆ ಹಾಕಿದ್ದ ಒಣಗಿಸಿದ್ದ ಬಟ್ಟೆ ತೆಗೆಯಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ದಂಪತಿಗಳಿಬ್ಬರು ಧಾರುಣವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ವಿನೋದಾ (42) ಮತ್ತು ಕೃಷ್ಣಪ್ಪ(54) ಮೃತ ದಂಪತಿಗಳಾಗಿದ್ದಾರೆ. ನಿನ್ನೆ ಸಂಜೆ ಸುಮಾರು 7ಗಂಟೆಗೆ ಎಂದಿನಂತೆ ಹಿಂದಿನ ಕೋಣೆಯಲ್ಲಿ ತಂತಿಯ ಮೇಲೆ ಒಣಗಿದ್ದ ಬಟ್ಟೆಯನ್ನು ತೆಗೆಯಲು ಹೋದ ಸಮಯದಲ್ಲಿ ತಂತಿಗೆ ವಿದ್ಯುತ್ ಶಾರ್ಟ್ ಸೆರ್ಕಿಟ್ ಆಗಿ ವಿನೋದಾ ಅವರಿಗೆ ವಿದ್ಯುತ್ ತಗುಲಿದೆ. ಈ ವೇಳೆ ಅವರನ್ನು ರಕ್ಷಿಸಲು ಹೋದ ಪತಿ ಕೃಷ್ಣಪ್ಪಅವರಿಗೂ ಕೂಡ ವಿದ್ಯುತ್ ಪ್ರಸರಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿದ್ಯುತ್ ತಂತಿ ತಗುಲುತ್ತಿದ್ದಂತೆ ಪತಿ ಕೃಷ್ಣಪ್ಪ ಚೀರಿದ ಶಬ್ದಕ್ಕೆ ಪಕ್ಕದ ಮನೆ ಮಂಜುನಾಥ್ ತಕ್ಷಣ ದೋಡಾಯಿಸಿ ರಕ್ಷಿಸಿಸಲು ಮುಂದಾದಾಗ ಅವರಿಗೂ ವಿದ್ಯುತ್ ಶಾಖ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕ್ಷಣಾರ್ಧದಲ್ಲಿ ಪತಿ,ಪತ್ನಿ ಇಬ್ಬರೂ ಕೂಡಾ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತ ದಂಪತಿಳು ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದು, ಮಕ್ಕಳ ರೋದನೆ ಹೇಳತೀರದಾಗಿತ್ತು. ಈ ಘಟನೆಯಿಂದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *