google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಿವಮೊಗ್ಗದ ಹೆಮ್ಮೆಯ ನ್ಯೂ ಮಂಡ್ಲಿ ಗಂಧರ್ವನಗರದ ದೇಶ್ ನೀಟ್ ಅಕಾಡೆಮಿಯ ಮೊದಲ ಬ್ಯಾಚ್ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದೆ. ಭವಿಷ್ಯತ್ತಿನ ವೈದ್ಯರ ಕನಸು ನನಸಾಗುತ್ತಿದೆ.

ಈ ಭಾರಿಯ ಫಲಿತಾಂಶದಲ್ಲಿ ದೇಶ್ ನೀಟ್ ಅಕಾಡೆಮಿ ಸುಮಾರು ೪೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆಯುವ ದೃಢ ನಿರೀಕ್ಷೆ ಹೊಂದಿರುತ್ತಾರೆ. ದೇಶ್ ನೀಟ್ ಅಕಾಡೆಮಿಯ ಕ್ರಿತು ಅಕ್ಷಯ 558, ಸ್ಮಿತಾ ಡೆಮೆಲ್ಲೋ 524, ಎ.ಎನ್. ಧೀಕ್ಷಿತ 522, ಫಣಿರಾಜ್ 516, ಸಿ.ಡಿ. ಅರುಣ್ 511, ಕೆ.ಜಿ. ಆತ್ಮೀಯ 508, ಮೋಹನ್ ಪಾಟೀಲ್, 504, ಎಸ್. ಸಚಿನ್, 502, ಹೆಚ್.ಸಿ. ವರ್ಷ 500 ಅಂಕಗಳನ್ನು ಗಳಿಸುವ ಮೂಲಕ ಅದ್ಭುತ ಸಾಧನೆ ಮೆರೆದು ಟಾಪರ್ಸ್ ಆಗಿ ಹೊರ ಹೊಮ್ಮಿದ್ದಾರೆ.

ಇದೇ ಅಕಾಡೆಮಿಯ ಬಿ.ಜಿ. ಕೀರ್ತನ 488, ಬಿ.ಕೆ. ಬುವನ್ 484, ಹೆಚ್.ಎಸ್. ರಕ್ಷಿತ್ 482, ಹೆಚ್.ಜೆ. ಹರ್ಷ 477, ಅಸ್ಮಿತಾ 473, ಸೃಷ್ಠಿ ಎಸ್. ಗೌಡ 471, ಎಂ. ಸಂಜನಾ 464, ಎಂ.ಬಿ. ದೀಪ್ತಿ, ಆಯೇಷಾ ಹಸನ್, ಜಿ.ಜೆ. ಮನೋಜ್ ತಲಾ 460 ಅಂಕ ಹಾಗೂ ಜಿ.ಟಿ. ಚಿಂತನ್ ಮತ್ತು ಟಿ. ನಂದನ್ ತಲಾ 458ಅಂಕ ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ ರಾಗಿದ್ದಾರೆ.

ಈ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು, ಅಧ್ಯಾಪಕರು ಅಭಿನಂದಿಸಿದ್ದಾರೆ. ಹೊಸ ಬ್ಯಾಚ್ ಪ್ರವೇಶ ಆರಂಭವಾಗಿದ್ದು, ಶಿವಮೊಗ್ಗ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳು ಈ ಸದವಕಾಶದ ಸದುಪಯೋಗ ಪಡೆಯುವಂತೆ ಆಡಳಿತ ಮಂಡಳಿ ಕೋರಿದೆ.

Leave a Reply

Your email address will not be published. Required fields are marked *