
ಶಿವಮೊಗ್ಗ :- ಸವಳಂಗ ರಸ್ತೆಯ ಕಲ್ಲಾಪುರ ಬಳಿಯ ಟೋಲ್ ನಲ್ಲಿಯೇ ಕಾರಿಗೆ ಯುವಕರ ಗುಂಪೊಂದು ಅಡ್ಡಗಟ್ಟಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಸುಮಾರು 10ಸಾವಿರ ಹಣ ದರೋಡೆ ಮಾಡಿರುವ ಘಟನೆ ನಡೆದಿದೆ.
ತಾಲೂಕಿನ ಗಾಮ ಗ್ರಾಮದ ಶಿವಯೋಗಿ ದರೋಡೆಗೆ ಒಳಗಾಗಿದ್ದು, ಜೂ. 12ರ ರಾತ್ರಿ ಗೃಹ ಉತ್ಪನ್ನಗಳನ್ನು ಮಾರಾಟ ಮಾಡಿಕೊಂಡು ಗ್ರಾಮಕ್ಕೆ ಕಾರ್‌ನಲ್ಲಿ ತೆರಳುತ್ತಿದ್ದ ಶಿವಯೋಗಿಯವರ ಕಾರನ್ನು ಅಡ್ಡಗಟ್ಟಿದ ಸುಮಾರು ೮ಜನರ ತಂಡ ಹಲ್ಲೆ ಮತ್ತು ದರೋಡೆ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಶಿವಯೋಗಿ ಅವರು ಶಿಕಾರಿಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬೇದಿಸಲು ಜಾಲ ಬೀಸಿದ್ದಾರೆ.

ಭದ್ರತೆ ಇಲ್ಲದ ಟೋಲ್ :
ಕಲ್ಲಾಪುರದ ಟೋಲ್‌ನಲ್ಲಿ ಕಾರಿಗೆ ಅಡ್ಡಗಟ್ಟಿ ಶಿವಯೋಗಿ ಅವರ ಮೇಲೆ ಹಲ್ಲೆ ನಡೆಯುತ್ತಿದ್ದರೂ. ಟೋಲ್‌ನ ಸಿಬ್ಬಂಧಿಗಳು ಸ್ಥಳದಲ್ಲೇ ಇದ್ದರು, ಒಬ್ಬನೂ ಕೂಡ ಅವರನ್ನು ಬಿಡಿಸಲು ಹೋಗಿಲ್ಲ. ಆ ಸಮಯದಲ್ಲಿ ಪೊಲೀಸರಿಗೆ ತಿಳಿಸಿಲ್ಲ, ಜೊತೆಗೆ 10ಸಾವಿರ ಲೂಟಿ ಮಾಡಿ, ಸುಮಾರು ಹೊತ್ತು ಅಲ್ಲೇ ನಿಂತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಭದ್ರತೆ ಇಲ್ಲದ ಇಂತಹ ಟೋಲ್‌ಗಳು ಬೇಕೆ ಎಂದು ಸ್ಥಳೀಯರು ದೂರಿದ್ದಾರೆ.
ಭದ್ರತೆ ಇಲ್ಲದ ಈ ರಸ್ತೆಯಲ್ಲಿ, ಟೋಲ್‌ನಲ್ಲಿ ಮುಂದೆ ವಾಹನ ಸವಾರರು ಓಡಾಡುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೆ ಈ ಬಗ್ಗೆ ತನಿಖೆ ನಡೆಸಿ ದರೋಡೆಕೋರರನ್ನು ಬಂಧಿಸಬೇಕೆಂದು ಮನವಿ ಮಾಡಿದ್ದಾರೆ.
