google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಭಾರತೀಯ ಸಂಸ್ಕೃತಿಯಲ್ಲಿ ಹಣ್ಣುಗಳಿಗೆ ಬಹಳ ಮಹತ್ವ ಇದ್ದು, ಆರೋಗ್ಯಯುತ ಬದುಕಿಗೆ ಹಣ್ಣಿನ ಸೇವೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಮೆ. ಮಲ್ಲಪ್ಪ ಅಂಡ್ ಸನ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಹಣ್ಣಿನ ಮೇಳಕ್ಕೆ ಇಂದು ಬೆಳಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವು ಉತ್ಪನ್ನಗಳ ಮಾರಾಟವು ಕೆಲವರಿಗಷ್ಟೇ ಸಿಮೀತವಾಗಿವೆ. ಆದರೆ ಅಂತಹ ಏಕ ಸ್ವಾಮ್ಯವನ್ನು ಮುರಿಯಬೇಕಾದರೆ ಎಲ್ಲರೂ ಎಲ್ಲ ರೀತಿಯ ವ್ಯಾಪಾರ ಮಾಡುವುದನ್ನು ಕಲಿಯಬೇಕಿದೆ. ಈ ನಿಟ್ಟಿನಲ್ಲಿ ಮೆ. ಮಲ್ಲಪ್ಪ ಅಂಡ್ ಸನ್ಸ್ ಮಾಲೀಕರಾದ ಮೋಹನ್ ಅವರ ಹಣ್ಣಿನ ವ್ಯಾಪಾರದ ವೈಖರಿ ಶ್ಲಾಘನೀಯ ಎಂದರು.

ಮೋಹನ್ ಅವರು ಮೊದಲು ಬಾಳೇ ಹಣ್ಣಿನ ವ್ಯಾಪಾರ ಶುರುಮಾಡಿದ್ದರು. ಮೊದಲ ಬಾರಿಗೆ ಅವರು ಹಣ್ಣುಗ ಳ ಸಂಗ್ರಹಕ್ಕೆ ಶೀಥಲಿಕರಣ ಸ್ಥಾಪಿಸಿ ಗಮನ ಸೆಳೆದಿದ್ದರು. ಅವತ್ತು ಬಾಳೆ ಕಾಯಿ ಮೋಹನ್ ಎಂದಾಗಿದ್ದ ಅವರೀಗ ತಮ್ಮಮಳಿಗೆಯಲ್ಲಿ ಈಗ ಎಲ್ಲಾ ಬಗೆಯ ಹಣ್ಣುಗಳ ಮಾರಾಟದೊಂದಿಗೆ ಹಣ್ಣುಗಳ ರಾಜ ಎಂದೆನಿಸಿಕೊಂಡಿ ದ್ದಾರೆ.ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ಇದೇ ಆಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಆರ್ ಎಸ್ ಎಸ್ ನ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿ ರಾಮ್ ಮಾತನಾಡಿ, ನಮ್ಮಸಮಾಜದಲ್ಲಿ ಇಂತಹವರ ಅಳಿಯ, ಇಂತಹವರ ಮಗ ಎಂದೆನಿಸಿಕೊಳ್ಳುವುದು ಸುಲಭ. ಆದರೆ ತಂದೆಯಾದವರು ಇಂತಹವರು ನನ್ನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಅಪರೂಪ.ಅಂತ ಸಾಧನೆಯೊಂದಿಗೆ ಮೋಹನ್ ಅವರು ತಮ್ಮ ತಂದೆ – ತಾಯಿ ಇಂತಹವರು ನಮ್ಮಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಹಣ್ಣಿನ ಉದ್ಯಮದಲ್ಲಿ ಯಶಸ್ವಿಯಾಗಿರುವುದು ವಿಶೇಷ ಎಂದರು.

ನಮ್ಮದು ಮೂಡ ನಂಬಿಕೆ ಅಲ್ಲ, ಸರ್ವ ನಂಬಿಕೆ. ಪ್ರಕೃತಿಯನ್ನು ನಂಬಿದವರು ಗೆಲ್ಲುತ್ತಾರೆ.ಪ್ರಕೃತಿ ನಮಗಾಗಿ ಇದೆ ಎನ್ನುವುದಕ್ಕಿಂತ ಪ್ರಕೃತಿ ನಂಬಿ ಬದುಕಿದರೆ ಗೆಲುವು ಖಚಿತ.ಅಂತಹ ಪ್ರಕೃತಿ ನಂಬಿಕೆಯೊಂದಿಗೆ ಮೋಹನ್ ಅವರು ಹಣ್ಣಿನ ವ್ಯಾಪಾರದ ಮೂಲಕ ಬೆಳೆದಿದ್ದು ವಿಶೇಷ ಎಂದು ಬಣ್ಣಿಸಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡರು ಅಧ್ಯಕ್ಷತೆ ವಹಿಸಿದ್ದರು. ಪ್ರಜ ಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾನಿಲಯದ ರಾಜಯೋಗಿ ಅನಸೂಯಕ್ಕ ಸಾನ್ನಿದ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ. ಡಾ. ಧನಂಜಯ ಸರ್ಜಿ, ಉದ್ಯಮಿಮೋಹನ್ ಅವರ ತಂದೆ ಮಲ್ಕಪ್ಪ ದಂಪತಿ ಇದ್ದರು.

Leave a Reply

Your email address will not be published. Required fields are marked *