
ಶಿವಮೊಗ್ಗ :- ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಆಧುನಿಕ 3ಡಿ ತಂತ್ರಜನವನ್ನು ಬಳಸಿಕೊಂಡು ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್ನಿಂದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಗುರುಕುಲಮ್ ಕಾರ್ಯದರ್ಶಿ ಜಿ. ಅರುಣ್ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಿವಮೊಗ್ಗದ ಬಿ.ಬಿ. ರಸ್ತೆಯಲ್ಲಿರುವ ಶ್ರೀರಾಮ ನಿವಾಸದಲ್ಲಿ ಬೆಳಗಿನ ಅವಧಿಯಲ್ಲಿ ನರ್ಸರಿ, ಎಲ್ಕೆಜಿ, ಯುಕೆಜಿಯನ್ನು ನಡೆಸುತ್ತಿದ್ದು, ಕಲಾಸಕ್ತರಿಗೆ ಅನುಕೂಲವಾಗುವಂತೆ ಭಾರತೀಯ ಕಲಾ ಪ್ರಕಾರದ ಶಿಕ್ಷಣ ನೀಡುತ್ತಾ ಬರುತ್ತಿದೆ ಎಂದರು.
ಆಧುನಿಕ ಶಿಕ್ಷಣದ ಜೊತೆಯಲ್ಲಿಯೇ ಭಾರತೀಯ ಲಲಿತ ಕಲೆಗಳಾದ ಗಮಕ, ಸಂಗೀತ, ನೃತ್ಯ, ಚಿತ್ರಕಲೆ, ಮೃದಂಗವಾದ, ಕೊಳಲುವಾದನ, ಪಿಟೀಲುವಾದನ ಶಿಕ್ಷಣವನ್ನು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ನೀಡುತ್ತಾ ಬರಲಾಗುತ್ತಿದೆ ಎಂದರು.

ಮಲ್ಯಾಧಾರಿತ ಶಿಕ್ಷಣವೊಂದೇ ಮಕ್ಕಳಲ್ಲಿ ಅಡಗಿರುವ ಸಪ್ತ ಪ್ರತಿಭೆಯನ್ನು ಹೊರತರಿಸಿ, ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಕೇವಲ ಅಂಕಗಳಿಕೆಗೆ ಪ್ರಧಾನವಾಗಿರುವ ಕಾಲಘಟ್ಟದಲ್ಲಿ ಮಕ್ಕಳ ಪ್ರತಿಭೆಗಳು, ಚಿಂತನೆ, ಸಹಜತೆ, ಕ್ರೀಯಾಶೀಲತೆ ಎಲ್ಲವೂ ಮೂಲೆಗುಂಪಾಗುತ್ತಿರುವ ಸಾಮಾಜಿಕವಾಗಿ ದೀರ್ಘಾವಧಿ ಆರೋಗ್ಯಕರ ಬೆಳವಣಿಗೆಯಲ್ಲ ಎಂಬುದು ತಿಳಿದ ಸಂಗತಿಯೇ ಆಗಿದೆ. ಈ ನಿಟ್ಟಿನಲ್ಲಿ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆಂದೇ ಸಂಕಲ್ಪತೊಟ್ಟು ಶಿಕ್ಷಣವನ್ನು ಆರಂಭಗೊಂಡಿದೆ ಎಂದರು.
ಭಾರತೀಯ ಸಂಸ್ಕತಿ, ಪರಂಪರೆ ಮತ್ತು ವಿಚಾರಗಳನ್ನೊಳಗೊಂಡ ಮಲ್ಯಯುತ ಶಿಕ್ಷಣವನ್ನು ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ನೀಡಲು ಆರಂಭಿಸಿದೆ. ಪೋಷಕರು ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರೀ ವಿದ್ಯಾರಣ್ಯ ಗುರುಕುಲಮ್ ಆಯ್ಕೆಮಾಡಿಕೊಂಡು, ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಕನಸ್ಸನ್ನು ಸಕಾರಗೊಳಿಸಬಹುದಾಗಿದೆ. ಪ್ರಸಕ್ತ ಶೈಕ್ಷಣಿಕ ಶಿಕ್ಷಣದ ಆರಂಭ ಜೂನ್ ೨ರಂದು ಆರಂಭಗೊಳ್ಳಲಿದ್ದು, ಆಸಕ್ತರು ದೂ.ಸಂ. : 98444-44820 ಅಥವಾ 77601-04592ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಎನ್.ಎಲ್. ಪ್ರಸಾದ್, ಮಂಜುನಾಥ್, ಪವನ್ ಕಾರಂಜಿ, ಗೋಪಾಲ್ಕೃಷ್ಣ ಭಾಗವತ್, ಪ್ರಾಂಶುಪಾಲೆ ವೀಣಾ ಅರುಣ್ ಉಪಸ್ಥಿತರಿದ್ದರು.
