ಸಾಗರ :- ಇಲ್ಲಿನ ಗಾಂಧಿ ಮೈದಾನದಲ್ಲಿ ಸೆಪ್ಟೆಂಬರ್ 22 ರ ಭಾನುವಾರ ಸಂಜೆ 4ರಿಂದ ರಾತ್ರಿ 10 ರವರೆಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಅಪರೂಪದ ಎರಡು ಪೌರಾಣಿಕ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದಿಂದ ‘ಶ್ರೀ ರಾಮಾಂಜನೇಯ’ ಹಾಗೂ ಯಕ್ಷಪಲ್ಲವಿ ಟ್ರಸ್ಟ್ ಮಾಳ್ಕೋಡ್ ಅವರಿಂದ ‘ಮಾತೆ ಜಗನ್ಮಾತೆ’ ಕಥಾನಕ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಚಿಂದ್ರ ಆಚಾರ್ಯ, ಸುನೀಲ್ ಭಂಡಾರಿ, ಪ್ರಜ್ವಲ್ ಹಾಗೂ ಚಿಂತನಾ ಹೆಗಡೆ ಮಾಳ್ಕೋಡ್, ಪರಮೇಶ್ವರ ಭಂಡಾರಿ, ಸುಬ್ರಹ್ಮಣ್ಯ ಭಂಡಾರಿ ಭಾಗವಹಿಸುವರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್‍ಗೋಡು ಮೋಹನದಾಸ ಶೆಣೈ, ಉದಯ ಹೆಗಡೆ ಕಡಬಾಳ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಕಾರ್ತೀಕ್ ಕಣ್ಣಿಮನೆ, ಮಹಾಬಲೇಶ್ವರ ಇಟಗಿ, ಪ್ರಣವ ಭಟ್, ನಿರಂಜನ ಜಾಗನಹಳ್ಳಿ, ಪವನಕುಮಾರ್ ಸಾಣ್ಮನೆ, ಪುರಂದರ ಮೂಡ್ಕಣಿ ಇವರು
ಶ್ರೀ ರಾಮಾಂಜನೇಯ ಪ್ರಸಂಗದ ಪಾತ್ರಧಾರಿಗಳು.
ಉದಯ ಹೆಗಡೆ ಮಾಳ್ಕೋಡ್, ಪ್ರಕಾಶ ಕಿರಾಡಿ, ವಿಶ್ವನಾಥ ಆಚಾರ್ಯ ತೊಂಬಟ್ಟು, ವಂಡಾರು ಗೋವಿಂದ, ಶ್ರೀಧರ ಭಟ್ ಕಾಸರಕೋಡು, ನಾಗಭೂಷಣ ಇತರರು ಮಾತೆ ಜಗನ್ಮಾತೆ ಪ್ರಸಂಗದ ಪಾತ್ರಧಾರಿಗಳು. ಸಾಗರದಲ್ಲಿ ಪ್ರಪ್ರಥಮ ಬಾರಿಗೆ ಒಂದೇ ರಂಗಸ್ಥಳದಲ್ಲಿ ಜನ್ಸಾಲೆ ಮತ್ತು ಚಿಂತನಾ ಹೆಗಡೆಯವರ ಗಾನ ರಸಧಾರೆ. ಹಲವು ಪ್ರಥಮಗಳ ರಸಘಟ್ಟದ ಪ್ರದರ್ಶನ ಇದು.
ಕಲಾಭಿಮಾನಿಗಳು ಆಗಮಿಸಿ ಕಲೆಯನ್ನೂ, ಕಲಾವಿದರನ್ನೂ ಪ್ರೋತ್ಸಾಹಿಸಬೇಕೆಂದು ಸಂಘಟಕ, ಪತ್ರಕರ್ತ ಗಣಪತಿ ಶಿರಳಗಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9448218775 ರಲ್ಲಿ ಸಂಪರ್ಕಿಸಿ.