
ಶಿವಮೊಗ್ಗ :- ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೋಷಕರ ಸಹಕಾರ, ಪ್ರೋತ್ಸಾಹ ಅಗತ್ಯ ಎಂದು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಡಾ. ಮೋಹನ್ ಆಳ್ವ ಕರೆ ನೀಡಿದರು.
ನಗರದ ಪ್ರಜ ಎಜುಕೇಷನ್ ಟ್ರಸ್ಟ್ ( ಪೇಸ್ ) ವತಿಯಿಂದ ಇಲ್ಲಿನ ಪೇಸ್ ಪಿಯು ಕಾಲೇಜು ಆವರಣದಲ್ಲಿ ನೂತನವಾಗಿ ಆರಂಭಗೊಂಡ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಉದ್ಘಾಟನೆ ನೆರವೇರಿಸಿ ಆನಂತರ ಶ್ರೀಮತಿ ಜಯಲಕ್ಷ್ಮೀ ಈಶ್ವರಪ್ಪ ಸಭಾ ಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭ ಹಾಗೂ ಕರ್ನಾಟಕ ವೈಭವ ನೃತ್ಯ ರೂಪಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೇಸ್ ಶಿಕ್ಷಣ ಸಂಸ್ಥೆಯ ಸಾಧನೆಯನ್ನು ಬಣ್ಣಿಸಿದ ಅವರು, ಖಾಸಗಿ ವಿದ್ಯಾಸಂಸ್ಥೆ ಗಳನ್ನು ಸಾಮಾ ಜಿಕ ತತ್ವ ಸಿದ್ಧಾಂತದಡಿ ಕಟ್ಟಬೇಕು. ವಿದ್ಯಾ ಸಂಸ್ಥೆಗಳು ವ್ಯಾಪಾರೀಕರಣ ಆಗಕೂಡದು. ಆಗ ಖಾಸಗಿ ವಿದ್ಯಾ ಸಂಸ್ಥೆಗಳಿಂದ ಕ್ರಾಂತಿ ಸಾಧ್ಯ. ಅದಕ್ಕೆ ಸಾಕ್ಷಿ ಪೇಸ್ ಶಿಕ್ಷಣ ಸಂಸ್ಥೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ಇವತ್ತು ರಾಜ್ಯದಲ್ಲಿಯೇ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿರುವುದಕ್ಕೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿನ ಗುಣಮಟ್ಟ. ನಮ್ಮ ವಿದ್ಯಾಸಂಸ್ಥೆ ಯಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಯ ಪಟ್ಟಿ ದೊಡ್ಡದಿದೆ ಎಂದ ಅವರು, ಈ ನೂತನ ಶಾಲೆ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷರೂ ಆದ ಉಪ ಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ ಮಾತ ನಾಡಿ, ಬಡವರು, ಕೂಲಿಕಾರ್ಮಿಕರ ಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯ ಬೇಕು. ವ್ಯಾವಹಾರಿಕ ಹಿನ್ನೆಲೆಯೊಂದ ರಿಂದಲೇ ಶೈಕ್ಷಣಿಕ ಗುಣಮಟ್ಟ ಅಳೆಯಬಾರದು, ಅದೇ ಉದ್ದೇಶದಿಂದ ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್ ಆರಂಭಿಸಲಾಗಿದೆ ಎಂದರು.
ಪ್ರಜ ಎಜುಕೇಷನ್ ಟ್ರಸ್ಟ್ ಖಜಾಂಚಿ ಕೆ.ಈ. ಕಾಂತೇಶ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ , ತಮ್ಮ ಶಾಲೆಯ ನಿರ್ಮಾಣದಲ್ಲಿ ಡಾ. ಎಂ. ಮೋಹನ್‌ಆಳ್ವರವರ ಕೊಡುಗೆಯನ್ನು ಸ್ಮರಿಸಿದರು.ಈ ಶಾಲೆ ಆರಂಭಿಸಲು ಅವರು ಉತ್ತೇಜನ ನೀಡಿದರು. ಇದರಿಂದ, ಈ ವಿದ್ಯಾಸಂಸ್ಥೆ ಜನ್ಮ ತಾಳಿದೆ ಎಂದ ಅವರು, 165 ವಿದ್ಯಾರ್ಥಿಗಳಿಂದ ಆರಂಭಗೊಂಡ ಕಾಲೇಜಿನಲ್ಲಿ ಪ್ರಸ್ತುತ 1400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯುವುದು ಖಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಎನ್.ಆರ್. ಪವನ್ ಕುಮಾರ್ ಮಾತನಾಡಿದರು. ಭರತನಾಟ್ಯ ಕಲಾವಿದ ಸಂಜಯ್ ಶಾಂತಾರಾಮ್ ನೇತೃತ್ವದ ಶಿವಪ್ರಿಯ ಸಂಸ್ಥೆ ನಾಟ್ಯ ಶಾಲೆಯ 40 ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಕಾಟ್ (ರಾಷ್ಟ್ರೀಯ ಮಟ್ಟದ ಕಾನೂನು ಪ್ರವೇಶ ಪರೀಕ್ಷೆ) ಪರೀಕ್ಷೆಯಲ್ಲಿ ದೇಶಕ್ಕೆ ೮೪ ನೇ ರಾಂಕ್ ಹಾಗೂ ರಾಜ್ಯಕ್ಕೆ 7ನೇ ರಾಂಕ್ ಪಡೆದ ನಗರದ ವೈ.ಎಸ್. ಅನಿಕೇತನ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಉಪಾಧ್ಯಕ್ಷ ಪ್ರೊ. ಹೆಚ್. ಆನಂದ್, ಕಾರ್ಯದರ್ಶಿ ಪ್ರೊ. ಬಿ.ಎನ್. ವಿಶ್ವನಾಥಯ್ಯ.ಉಪನ್ಯಾಸಕ ಸಂಜಯ್, ಶಾಲಿನಿ ಕಾಂತೇಶ್, ಕೃಷ್ಣ ಇದ್ದರು.
