google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಒಮ್ಮನಸ್ಸಿನ ಭಕ್ತಿ ದೇವರಿಗೆ ಬಹಳ ಪ್ರಿಯ. ದೇವರ ಪೂಜೆ-ಪುನಸ್ಕಾರ, ಸಂಸ್ಕಾರ, ಅತಿಥಿ ಸತ್ಕಾರ ಎಲ್ಲವೂ ಈ ಕುಟುಂಬದಲ್ಲಿ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಈ ಕುಟುಂಬ ಆದರ್ಶ ಕುಟುಂಬ ಎಂದು ಬೆಕ್ಕಿನ ಕಲ್ಮಠದ ಶ್ರೀಮನ್ಮಹರಾಜ ನಿರಂಜನ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಅವರು ಇಂದು ಯುವ ಮುಖಂಡ ಕೆ.ಈ.ಕಾಂತೇಶ್ ಅವರ ೪೫ ನೇ ಜನ್ಮ ದಿನದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕಾಂತೇಶ್ ಗೆಳೆಯರ ಬಳಗದ ವತಿಯಿಂದ ನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಶುಭಾಶೀರ್ವಾದ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ್ದ ಶ್ರೀಗಳ ಪಾದಪೂಜೆ ಮತ್ತು ೫೦ ವರ್ಷ ವೈವಾಹಿಕ ಜೀವನ ಪೂರೈಸಿದ ಹಿರಿಯ ದಂಪತಿಗಳಿಂದ ಕೆ.ಈ.ಕಾಂತೇಶ್ ಅವರಿಗೆ ಶುಭಾಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಂದರ್ಭವನ್ನು ನೋಡಿದಾಗ ಮಹಾರಾಜರ ಪಟ್ಟಾಭಿಷೇಕ ನೆನಪಾಗುತ್ತದೆ ಎಂದರು.

ಹುಟ್ಟು ಹಬ್ಬ ಎನ್ನುವುದು ಕೇವಲ ನೆಪ ಮಾತ್ರ. ಕೆ.ಎಸ್.ಈಶ್ವರಪ್ಪಅವರ ಸೇವಾ ಕಾರ್ಯಗಳನ್ನು ನೋಡುತ್ತಾ ಬಂದಿದ್ದೇವೆ. ಮಠ, ಮಂದಿರ, ಶಾಲೆ, ಶಿಕ್ಷಣ ಸಂಸ್ಥೆಗಳಲ್ಲಿ ಬಹುಮುಖವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ. ಸಕ್ರಿಯವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಬದಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿದರು.

ಕೂಡ್ಲಿ ಶ್ರೀ ಶೃಂಗೇರಿ ಸಂಸ್ಥಾನ ಮಠದ ಶ್ರೀ ಅಭಿನವ ಶಂಕರ ಭಾರತಿ ಮಹಾ ಸ್ವಾಮಿಗಳು ಆಶೀರ್ವಚನ ನೀಡಿ, ಕಾಂತೇಶ್ ಅವರ ೪೫ ರ ಜನ್ಮ ದಿನದ ಸಂಭ್ರಮಾಚರಣೆಯ ಹಿನ್ನೆಲೆ ಕೆಲವರು ಬೇರೆ ಬೇರೆ ರೀತಿಯಾದ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಯಾರಾದರೂ ಗೌರವಿಸುವಾಗ ಅವರದೇನು? ಅವರಿಗೇಕೆ ಗೌರವ?, ಎಲ್ಲರೂ ಮಾನವರೇ ಎನ್ನುತ್ತಾರೆ. ಆದರೆ ಒಬ್ಬ ಮಾನವ ಇನ್ನೊಬ್ಬ ಮಾನವನಿಗೆ ಗೌರವಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸೃಷ್ಟಿಕರ್ತರಿಗೆ ಮಾತ್ರ ದೇವರು ಎನ್ನುವುದಿಲ್ಲ. ನಾವು ಯಾರನ್ನು ಬೇಕಾದರೂ ಪೂಜಿಸಬೇಕು. ಯಾರು ಪೂಜ್ಯರು ಯಾರು ಅಪೂಜ್ಯರು ಎಂದು ತಿಳಿದುಕೊಳ್ಳಬೇಕು. ಸಮಾಜದಲ್ಲಿ ಯಾರು ಗೌರವನ್ನು ಪಡೆದುಕೊಂಡಿರುತ್ತರೂ ಅವರನ್ನು ಅನುಸರಿಸುವುದು ಸಮಾಜದ ಸಹಜ ಸ್ವಭಾವ. ನಾಯಕರಾದ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ಕೂಡಾ ಅವರ ತಂದೆಯ ರೀತಿಯಲ್ಲಿಯೇ ಮುಂದುವರೆಯಲಿ ಎಂದು ಹೇಳಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಈ ಒಂದು ಪವಿತ್ರ ಕಾರ್ಯಕ್ರಮದಲ್ಲಿ ಯತೀಂದ್ರ ರವರ ಸಮ್ಮುಖದಲ್ಲಿ ಆಶೀರ್ವಾದ ಪಡೆದಿರುವುದು ಹೆಮ್ಮೆಯ ವಿಷಯ. ಬದುಕು ಸಾರ್ಥಕತೆಯ ಹಾದಿಯಲ್ಲಿರುವ ವ್ಯಕ್ತಿಯನ್ನು ಸಾವಿರಾರು ವರ್ಷ ಸ್ಮರಿಸುತ್ತೇವೆ. ಕೆ.ಎಸ್.ಈಶ್ವರಪ್ಪ ಅವರು ಗೆಲುವು ಸೋಲುಗಳನ್ನು ಅನುಭವಿಸಿ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದರು.

ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಯುವಕರ ನೇತರ ಯುವಕರ ಕಣ್ಮಣಿ ಕೆ.ಈ.ಕಾಂತೇಶ್ ಅವರ ಜನ್ಮ ದಿನಾಚರಣೆಯನ್ನು ಕೆ.ಈ.ಕಾಂತೇಶ್ ಗೆಳೆಯರ ಬಳಗದ ವತಿಯಿಂದ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.

ಚಿಕ್ಕಮಗಳೂರು ಬಸವ ತತ್ವ ಪೀಠ, ಶಿವಮೊಗ್ಗ ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಚೇತನ್, ಮಹಾಲಿಂಗಯ್ಯ ಶಾಸ್ತ್ರೀ ಮಾತನಾಡಿದರು. ಕೆ.ಈ.ಕಾಂತೇಶ್ ದಂಪತಿಗಳು ಶ್ರೀಗಳಿಗೆ ಪಾದ ಪೂಜೆ ನೆರವೇರಿಸಿದರು. 50 ವರ್ಷ ಪೂರೈಸಿದ ಹಿರಿಯರಿಂದ ಶುಭಾಶೀರ್ವಾದ ಪಡೆದರು. ರಾಷ್ಟ್ರೀಯ ಸ್ವಯಂಸೇವಕರಾದ ಲೋಕೇಶ್, ಚೇತನ್ ಅವರಿಗೆ ಗೌರವಿಸಲಾಯಿತು. ದಾಸೋಹ ಟ್ರಸ್ಟ್ ವತಿಯಿಂದ ಪುಸ್ತಕ ಬಿಡುಗಡೆ ನೆರವೇರಿತು. ಆಗಮಿಸಿದ ಎಲ್ಲಾ ದಂಪತಿಗಳಿಗೆ ಪುಸ್ತಕ ಮತ್ತು ಶ್ರೀ ರಾಮ ರಕ್ಷೆಯನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಕಾಗಿನೆಲೆ ಶ್ರೀಗಳು, ಈಶ್ವರಾನಂದಪುರಿ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀಗಳು, ಹಿರೇಮಠ ಬಿಳಕಿ ಶ್ರೀಗಳು ತಾವರೆಕೆರೆ ಹಿರೇಮಠದ ಶ್ರೀಗಳು ಬ್ರಹ್ಮಕುಮಾರಿ ಸಂಸ್ಥೆಯ ಬ್ರಹ್ಮಕುಮಾರಿ ಅನಸೂಯ ಅಕ್ಕನವರು, ಆರ್.ಎಸ್.ಎಸ್.ನ ವಿಭಾಗ ಕಾರ್ಯವಾಹಕ ಗಿರೀಶ್ ಕಾರಂತ್, ಚೇತನ್.ಜಿ, ಲೋಕೇಶ್, ಕೆ.ಎಸ್.ಈಶ್ವರಪ್ಪ ಅವರ ಕುಟುಂಬದವರು ಹಾಗೂ ಗುರು ಹಿರಿಯರು, ೫೦ ವರ್ಷ ಪೂರೈಸಿದ ದಂಪತಿಗಳು ಉಪಸ್ಥಿತರಿದ್ದರು. ಕೆ.ಈ.ಕಾಂತೇಶ್ ಪುತ್ರಿ ಸಿಂಧು ಪ್ರಾರ್ಥಿಸಿ, ಈ.ವಿಶ್ವಾಸ್ ಸ್ವಾಗತಿಸಿದರು.

Leave a Reply

Your email address will not be published. Required fields are marked *