ಶಿವಮೊಗ್ಗ :- ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಮೊಗ್ಗದ ಮಾಚೇನಳ್ಳಿ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಚೇಂಬರ್ಸ್‌ನ ಪದಾಧಿಕಾರಿಗಳು ಸಚಿವರಿಗೆ ಮಾಚೇನಹಳ್ಳಿ ಯಲ್ಲಿ ಸ್ಕಿಲ್ ಡೆವಲಪ್ ಮೆಂಟ್ ಕಟ್ಟಡ ಪೂರ್ಣಗೊಳ್ಳಲು ಇನ್ನೂ7ಕೋಟಿ ರೂ ಸರ್ಕಾರದಿಂದ ಬಿಡುಗಡೆಗೊಳಿಸಲು ಮನವಿ ನೀಡಲಾಯಿತು.
ಸಚಿವರು ತಕ್ಷಣ ಸ್ಕಿಲ್ ಡೆವಲ ಪ್ಮೆಂಟ್ ಇಲಾಖೆಯೊಂದಿಗೆ , ಇಂಡಸ್ಟ್ರಿ ಸಚಿವರೊಂದಿಗೆ, ಕೌಶಲ್ಯ ಅಭಿವೃದ್ಧಿ ಸಚಿವರೊಂದಿಗೆ ಮಾತ ನಾಡಿ, ಹಣ ಬಿಡುಗಡೆಯ ಭರವಸೆ ನೀಡಿದ್ದಾರೆ. ಈ ಯೋಜನೆಯಿಂದ ಸುಮಾರು 10ಸಾವಿರ ಯುವಕರಿಗೆ ತರಬೇತಿ ದೊರಕುವ ಮೂಲಕ ಅವರ ಭವಿಷ್ಯಕ್ಕೆ ಬೆಳಕು ಸಿಕ್ಕಂತಾಗುತ್ತದೆ.
ಈ ಸಂದರ್ಭದಲ್ಲಿ ಇಂಡಸ್ಟ್ರಿ ಅಂಡ್ ಕಾಮರ್ಸ್ ಚೇಂಬರ್ಸ್ ನ ಅಧ್ಯಕ್ಷ ಬೆನಕಪ್ಪ, ಕಾರ್ಯದರ್ಶಿಯಾದ ರಾಜೇಶ್, ಚೇಂಬರ್ ಶಾಶ್ವತ ಸದಸ್ಯ ರಾಜು, ಮಾಜಿ ಅಧ್ಯಕ್ಷ ರಮೇಶ್ ಹೆಗಡೆ, ಮಾಜಿ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ಚಿನ್ನಪ್ಪಹಾಗೂ ಇನ್ನಿತರರಿದ್ದರು.
