google.com, pub-9939191130407836, DIRECT, f08c47fec0942fa0

ಶಿವಮೊಗ್ಗ: ವಿನೋಬನಗರ 60 ಅಡಿ ರಸ್ತೆಯ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಸರಳ ಸಜ್ಜನಿಕೆ ಹಾಗೂ ಕರ್ತವ್ಯ ದಕ್ಷತೆ ಹೊಂದಿದ್ದ ವೇ||ಬ್ರ||ಶ್ರೀ ವಿನಾಯಕ ಬಾಯರಿ ಅವರು ದೈವಾಧೀನರಾಗಿದ್ದು ತತ್ಸಂಬಂಧ ಮಾ. 14ರ ಶುಕ್ರವಾರ ಬೆಳಿಗ್ಗೆ 11.30ರಿಂದ ಶುಭ ಮಂಗಳ ಸಮುದಾಯ ಭವನದಲ್ಲಿ ಅವರಿಗೆ ನುಡಿ ನಮನ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ.

ದೇವಾಲಯ ಸಮಿತಿ ಅಧ್ಯಕ್ಷರು, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆ.ಎಸ್.ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ದೇವಳ ಸಮಿತಿ, ಅರ್ಚಕ ವೃಂದ, ಭಜನಾ ಪರಿಷತ್ ಮತ್ತು ಶ್ರೀಗಂಧ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನುಡಿ ನಮನ ಹಾಗೂ ಮಿತ್ರ ಭೋಜನ ಕಾರ್ಯಕ್ರಮವಿದೆ.

ವಿನಾಯಕ ಬಾಯರಿ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಗುರು ಅ.ಪ. ರಾಮಭಟ್ಟರು ಹಾಕಿಕೊಟ್ಟ ಹಾದಿ ಯಲ್ಲಿ ಬದುಕನ್ನು ರೂಪಿಸಿಕೊಂಡಿದ್ದ ವಿನಾಯಕ ಬಾಯರಿ ಅವರು ವಿನೋಬನಗರ 60ಅಡಿ ರಸ್ತೆಯ ಶ್ರೀ ಶನೈಶ್ಚರ ದೇವಸ್ಥಾನವನ್ನು ಶಿವಮೊಗ್ಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದರು. ಇವರ ನೇತೃತ್ವದಲ್ಲಿ ಮಾನ್ಯ ಕೆ.ಎಸ್.ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಶುಭ ಮಂಗಳ ಸಮುದಾಯ ಭವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳೇ ನಡೆದದ್ದು ಹೆಚ್ಚು ಎಂದರೆ ಅತಿಶಯೋಕ್ತಿಯಲ್ಲ.

ರವೀಂದ್ರನಗರ ಶ್ರೀ ಪ್ರಸನ್ನ ಗಣಪತಿ ದೇವಳದ ಪ್ರಧಾನ ಅರ್ಚಕ ಶ್ರೀ ಅ.ಪ.ರಾಮಭಟ್ಟರ ದ್ವಿತೀಯ ವರ್ಷದ ಪುಣ್ಯ ದಿನದಂದೇ ವಿನಾಯಕ ಬಾಯರಿ ಅವರು ಇಹಲೋಕದ ಯಾತ್ರೆ ಮುಗಿಸಿದ್ದು ಮಾತ್ರ ನಮಗೆ ಅರ್ಥವಾಗದ ಪಾರಮಾರ್ಥಿಕ ಸೋಜಿಗ. ಒಟ್ಟಾರೆ ವಿನಾಯಕ ಬಾಯರಿ ಅವರ ಅಕಾಲಿಕ ಸಾವು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟ ತಂದಿದೆ. ಮಾ. 14ರಂದು ಬೆಳಿಗ್ಗೆ 11 ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ಶ್ರೀಯುತ ವಿನಾಯಕ ಬಾಯರಿ ಅವರಿಗೆ ನುಡಿ ನಮನ ಕಾರ್ಯಕ್ರಮವಿರುತ್ತದೆ. ಭಕ್ತರು ಹಾಗೂ ಹಿತೈಷಿಗಳು ತಪ್ಪದೇ ಪಾಲ್ಗೊಳ್ಳುವಂತೆ ದೇವಳ ಸಮಿತಿ ಪರವಾಗಿ ಪ್ರಧಾನ ಕಾರ್ಯದರ್ಶಿ ಸ.ನ.ಮೂರ್ತಿ ಕೋರಿದ್ದಾರೆ.

Leave a Reply

Your email address will not be published. Required fields are marked *