ಶಿವಮೊಗ್ಗ :- ಇತಿಹಾಸ ಪ್ರಸಿದ್ಧ ದುರ್ಗಿಗುಡಿ ಶ್ರೀ ದುರ್ಗಮ್ಮನ ಮತ್ತು ಮರಿಯಮ್ಮನ ಸನ್ನಿಧಿಯಿಂದ ಹೋಳಿ ಹುಣ್ಣಿಮೆ ನಿಮಿತ್ತ ಅಲಂಕಾರಬರಿತ ತೇರಿನ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಸಹಸ್ರಾರು ಭಕ್ತರು ತೇರನ್ನು ಎಳೆಯುವುದಕ್ಕೆ ಬೆಳಿಗ್ಗೆಯಿಂದಲೇ ಕಾತುರರಾಗಿದ್ದರು. ಪೂಜಾ ವಿಧಿ ವಿಧಾನಗಳ ನಂತರ ಇಂದು ಮಧ್ಯಾಹ್ನ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಶಿವಮೊಗ್ಗ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಂದಲೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀ ದುರ್ಗಮ್ಮನ ಮತ್ತು ಮರಿಯಮ್ಮನ ರಥೋತ್ಸವಕ್ಕೆ ಹಲವು ವರ್ಷಗಳ ಇತಿಹಾಸವಿದೆ. ದೇಶಾದ್ಯಂತ ಹೋಳಿ ಹುಣ್ಣಿಮೆಯಂದು ಹೋಳಿ ಆಚರಿಸಿದರೆ ಶಿವಮೊಗ್ಗದಲ್ಲಿ ದುರ್ಗಿಗುಡಿಯ ದುರ್ಗಮ್ಮ ದೇವರ ತೇರು ಎಳೆದ ಮರುದಿನ ಹೋಳಿ ಆಚರಿಸುವುದು ಸಂಪ್ರದಾಯ. ಉತ್ಸವದಲ್ಲಿ ಮಜ್ಜಿಗೆ ವಿತರಣೆ, ಪ್ರಸಾದ ವಿತರಣೆ ನಡೆಯಿತು. ಇದಕ್ಕಾಗಿ ಮೂರ್‍ನಾಲ್ಕು ಕೌಂಟ್ ಮಾಡಲಾಗಿತ್ತು. ಸಂಜೆ ಇನ್ನೂ ಹೆಚ್ಚಿನ ಭಕ್ತರು ಪ್ಲಾಗೊಳ್ಳುವ ನಿರೀಕ್ಷೆ ಇದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
