
ಶಿವಮೊಗ್ಗ :- ಕೆ.ಇ. ಕಾಂತೇಶ್ ಗೆಳೆಯರ ಬಳಗದಿಂದ ಕೆ.ಇ. ಕಾಂತೇಶ್ ಅವರ 45ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಾ. 27ರಂದು ಬೆಳಗ್ಗೆ 8 ಗಂಟೆಯಿಂದ ಶುಭಮಂಗಳ ಸಮುದಾಯ ಕಲ್ಯಾಣ ಮಂಟಪದಲ್ಲಿ ಆಶೀರ್ವಾದ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಪ್ರಮುಖರಾದ ಇ. ವಿಶ್ವಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಮಠಾಧೀಶರ ಪಾದಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಹಿಂದೂ ಧರ್ಮದ ವಿವಿಧ ಸಮಾಜದ 50 ವರ್ಷ ವೈವಾಹಿಕ ಜೀವನ ಪೂರೈಸಿದ 90 ದಂಪತಿಗಳಿಂದ ಶುಭ ಹಾರೈಕೆ ಕಾರ್ಯಕ್ರಮ ಇರುತ್ತದೆ ಎಂದರು.
ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ, ಡಾ. ಶ್ರೀ ಬಸವಮರುಳ ಸಿದ್ಧ ಸ್ವ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಸಾಯಿನಾಥ ಸ್ವಾಮೀಜಿ, ಶ್ರೀ ಡಾ. ಮಹಾಂತ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬ್ರಹ್ಮಕುಮಾರಿ ಅನಸೂಯ ಅಕ್ಕ, ಆರ್.ಎಸ್.ಎಸ್.ನ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಭಾಗವಹಿಸಲಿದ್ದಾರೆ ಎಂದರು.
ಕಾಂತೇಶ್ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕ್ರೀಡೆಗಳನ್ನು ಯುವೋತ್ಸವ ಕಾರ್ಯಕ್ರಮ ಅಡಿಯಲ್ಲಿ ಆಯೋಜಿಸಲಾಗಿದ್ದು, ಮಾ. 21 ಮತ್ತು 22ರಂದು ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಹಾಗೂ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮಾ. 23, 24ರಂದು ನಗರದ ಎನ್‌ಇಎಸ್ ಕ್ರೀಡಾಂಗಣದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಾ. 23ರಂದು ಗುಂಡಪ್ಪ ಶೆಡ್ ಮಲ್ಲೇಶ್ವರ ನಗರದಲ್ಲಿ ರಾವ್ ಸ್ಪೋರ್ಟ್ಸ್ ಅರೇನಾದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಈ ಯುವೋತ್ಸವ ಕ್ರೀಡಾಕೂಟಕ್ಕೆ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಶರಣ್ ಭಾಗವಹಿಸಲಿದ್ದಾರೆ. ಎಲ್ಲಾ ಕ್ರೀಡೆಗಳಿಗೂ ನಗದು ಬಹುಮಾನ, ಟ್ರೋಫಿ ಇದ್ದು, ಕ್ರೀಡಾಳುಗಳಿಗೆ ಉಚಿತ ಊಟ ವ್ಯವಸ್ಥೆ ಮಾಡಲಾಗಿದೆ. ಮಾಹಿತಿಗಾಗಿ ಕಬಡ್ಡಿ ಪಂದ್ಯಾವಳಿಗೆ 9986474525 ಥ್ರೋಬಾಲ್ ಪಂದ್ಯಾವಳಿಗೆ 99454 74101, ಕ್ರಿಕೆಟ್ ಗೆ 90088 74827 ಸಂಪರ್ಕಿಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಲಿಂಗಶಾಸ್ತ್ರಿ, ಶಶಿ ಕೆ.ಎಸ್. ರಂಗನಾಥ್, ಶ್ರೀನಾಥ್ ಎಸ್.ಆರ್., ರಮೇಶ್ ಸೋಗಾನೆ, ಜಾಧವ್, ಗಿರೀಶ್, ಅ.ಮ. ಪ್ರಕಾಶ್, ಮೋಹನ್, ಸೋಮಶೇಖರ್, ಮಠಪತಿ ಕೆ.ಜೆ., ವಿನಯ್, ರವೀಂದ್ರ ಕೆ.ಆರ್. ಇನ್ನಿತರರು ಇದ್ದರು.
