google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಹಣ್ಣುಗಳ ಖರೀದಿಗೆ ಸಹ ಇದೀಗ ಬಹುಮಾನ ಯೋಜನೆ ಆರಂಭಿಸಲಾಗಿದ್ದು, ಇದರ ಕೀರ್ತಿ ಶಿವಮೊಗ್ಗ ನಗರದ ಎಪಿಎಂಸಿ ಯಾರ್ಡ್ನ ಡಿ.ಮಲ್ಕಪ್ಪ ಅಂಡ್ ಸನ್ಸ್ ಅವರಿಗೆ ಸಲ್ಲುತ್ತದೆ.

ವಿವಿಧ ತಾಜಾ ಹಣ್ಣುಗಳಿಗೆ ಈ ಅಂಗಡಿ ನಗರದಲ್ಲಿ ಬಹು ಪ್ರಸಿದ್ಧಿ ಪಡೆದಿದೆ. ಹೋಲ್‌ಸೇಲ್ ದರದಲ್ಲಿ ರೀಟೆಲ್ ಮಾರಾಟ ಈ ಸಂಸ್ಥೆಯ ವೈಶಿಷ್ಟವಾಗಿದೆ. ದೇಶ ವಿದೇಶಗಳ ಬಹುತೇಕ ಎಲ್ಲ ರೀತಿಯ ಹಣ್ಣುಗಳು ಇಲ್ಲಿ ಲಭ್ಯವಿದೆ. ಇದೇ ತಿಂಗಳು ಅಂದರೆ ಸೆ. 15ರಿಂದ ನವೆಂಬರ್ 2ರವರೆಗೆ ಹಣ್ಣು ಪ್ರಿಯರು ಇಲ್ಲಿ 500 ರೂ. ಗೂ ಮೇಲ್ಪಟ್ಟು ಹಣ್ಣುಗಳನ್ನು ಖರೀದಿಸಿದರೆ ಅವರಿಗೆ ಲಕ್ಕಿ ಕೂಪನ್ ನೀಡಲಾಗುವುದು. ನ. 11ರಂದು ಲಕ್ಕಿ ಡ್ರಾ ಜರುಗಲಿದ್ದು, ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.

ವಾಷಿಂಗ್ ಮೆಷಿನ್, ಫ್ರಿಡ್ಜ್, ಲ್ಯಾಪ್‌ಟಾಪ್, ಮೊಬೈಲ್, ವಾಚ್ ವಗೈರೆಗಳನ್ನು ವಿಜೇತರಿಗೆ ಬಹುಮಾನ ರೂಪದಲ್ಲಿ ನೀಡಲಾಗುತ್ತದೆ. ದಸರಾ ಹಾಗೂ ದೀಪಾವಳಿ ನಿಮಿತ್ತ ಶಿವಮೊಗ್ಗದಲ್ಲಿ ಪ್ರಪ್ರಥಮವಾಗಿ ಹಣ್ಣು ಖರೀದಿಸುವವರಿಗಾಗಿ ಈ ಒಂದು ಸ್ಕೀಂ ಜಾರಿಗೆ ತರಲಾಗಿದೆ.

ಡಿ. ಮಲ್ಕಪ್ಪ ಅಂಡ್ ಸನ್ಸ್ ಹೈಟೆಕ್ ಬಾಳೆಹಣ್ಣು ಮತ್ತು ಮಾವಿನ ಹಣ್ಣು ಮಾಗಿಸುವ ಘಟಕಕ್ಕೆ ಅಂದರೆ ಎಪಿಎಂಸಿ ಯಾರ್ಡ್ನಲ್ಲಿರುವ ಈ ಹಣ್ಣಿನ ಮಳಿಗೆಗೆ ತಕ್ಷಣ ಭೇಟಿ ನೀಡಿ ನ್ಯಾಯಯುತ ದರದಲ್ಲಿ 500 ರೂ. ಹಣ್ಣು ಖರೀದಿಸಿ ಕೂಪನ್ ಪಡೆದು ಅದೃಷ್ಟವಂತರಾಗಿ ಎಂಬುದು ಸಂಸ್ಥೆಯ ಬಾಳೆಕಾಯಿ ಮೋಹನ್ ಮತ್ತು ಮಾವಿನಹಣ್ಣು ಮಂಜು ಅವರು ಕೋರಿದ್ದಾರೆ. ವಿವರಗಳಿಗೆ 97411 34972, 84315 43003 ರಲ್ಲಿ ಸಂಪರ್ಕಿಸಿ.

Leave a Reply

Your email address will not be published. Required fields are marked *