
ಶಿವಮೊಗ್ಗ :- ಇನ್ನೇನು ಕೆಲವೇ ದಿನಗಳಲ್ಲಿ ಶುಂಠಿಯ ಬೆಲೆ ಹೆಚ್ಚಾಗಲಿದ್ದು, ರಾಜ್ಯದ ರೈತರು ರೂ. 4290 ಗಿಂತ ಕಡಿಮೆ ಬೆಲೆಯಲ್ಲಿ ಶುಂಠಿಯನ್ನು ಮಾರಾಟ ಮಾಡಬಾರದು ಎಂದು ಕರ್ನಾಟಕ ರಾಜ್ಯ ಶುಂಠಿ ಬೆಳೆಗಾರರ ಸಂಘದ ಗಿರೀಶ್ ಕುಮಾರ್ ರೈತರಲ್ಲಿ ಮನವಿ ಮಾಡಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಂಠಿ ಬೆಳೆಯ ಬೆಲೆ ಹೆಚ್ಚಿಸುವ ಕುರಿತಾಗಿ ಇದೇ ಜನವರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದೆವು. ಆ ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದರು. ನಂತರ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲಿಗೆ ರೂ.2574 60 ಕೆಜಿ ಖರೀದಿಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದೆ ಎಂದರು.

ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರಸ್ತಾವನೆ ಜರಿಯಾಗಬಹುದು. ರೈತರು ಶುಂಠಿಯನ್ನು ರೂ.4290 ಕ್ಕಿಂತ ಕಡಿಮೆ ಮಾರಾಟ ಮಾಡಬಾರದು. ಕಾರಣ ಎಪಿಎಂಸಿ ಶುಂಠಿ ಖರೀದಿ ಕೇಂದ್ರವನ್ನು ತೆರೆದು ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತದೆ. 60 ಕೆಜಿ ಬ್ಯಾಗ್ ಗೆ ರೂ.2579 ಸಿಗಲಿದೆ ಎಂದರು.
1.42 ಲಕ್ಷ ಹೆಕ್ಟೇರ್ ಪ್ರದೇಶಲ್ಲಿ ಶುಂಠಿ ಬೆಳೆಯಲಾಗಿದ್ದು, ಈಗಾಗಲೇ ಕೆಲವರು ಮಾರಾಟ ಮಾಡಿದ್ದು, ಇನ್ನುಳಿದ 60000 ಹೆಕ್ಟೇರ್ ನಲ್ಲಿ ಬೆಳೆದ ಶುಂಠಿ ಬೆಳೆಗಾರರು ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಕೃಷ್ಣ ಆನವಟ್ಟಿ, ವಸೀಂ ಶಿಕಾರಿಪುರ, ನರಸಿಂಹ ಮೂರ್ತಿ ಶಿವಮೊಗ್ಗ, ರಮೇಶ್ ನ್ಯಾಮತಿ ಹೊನ್ನಾಳ್ಳಿ, ಬೊಮ್ಮನಾಯ್ಕ್ ಸೇರಿದಂತೆ ಇನ್ನಿತರರಿದ್ದರು.
