
ಶಿವಮೊಗ್ಗ :- ಹೋಟೆಲ್ ನಡೆಸುತ್ತಿರುವ ಎಲ್ಲರೂ ಒಟ್ಟುಗೂಡಿ ಸಂಘ ಮುನ್ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹೋಟೆಲ್ ನಡೆಸುವ ಎಲ್ಲರಿಗೂ ಬೆಂಬಲವಾಗಿ ಸಂಘವು ಕಾರ್ಯ ನಿರ್ವಹಿಸಬೇಕು ಎಂದು ಗಾಂಧಿಬಜಾರಿನ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಅಧ್ಯಕ್ಷ ಎ.ಎಚ್. ಸುನೀಲ್ ತಿಳಿಸಿದರು.
ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ. ಬಸವರಾಜ್ ಅವರನ್ನು ಶಿವಮೊಗ್ಗ ನಗರದ ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದಿಂದ ಅಭಿನಂದಿಸಿ ಮಾತನಾಡಿದ ಅವರು, ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿಯು ಕಾರ್ಯೋ ನ್ಮುಖವಾಗಬೇಕು ಎಂದರು.
ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳುವ ಮೂಲಕ ಸಂಘದ ವ್ಯಾಪ್ತಿ ಹೆಚ್ಚಿಸಬೇಕು. ಹೋಟೆಲ್ ನಡೆಸುವವರು ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆಲಸವಾಗಬೇಕು ಎಂದು ತಿಳಿಸಿದರು.
ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಮಾತನಾಡಿ, ಸ್ವಾಗತ್ ಕ್ಯಾಂಟೀನ್ ಬಸಣ್ಣ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರು ವುದು ಸಂತೋಷದ ಸಂಗತಿ. ಸಂಘಟನೆ ಬಲ ಹೆಚ್ಚಿಸಿಕೊಂಡು ಕಾರ್ಯ ನಿರ್ವಹಿ ಸಲಿ ಎಂದು ಶುಭಕೋರಿದರು.
ಸಂಘದ ಜಿ. ಮಧು, ಪ್ರಭಾಕರ ಗೌಡ, ಆಶೀಸ್ ಜಿ.ಶೇಟ್, ಸದಾ ನಂದ, ಗಣೇಶ್, ಸುನೀಲ್‌ಕುಮಾರ್, ರಂಗನಾಥ್, ಶ್ರೀನಿವಾಸ್, ಜನ್ನಿ, ರಾಜು, ಬಾಬು ಮತ್ತಿತರರಿದ್ದರು.