google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಭಾರತದ ಆರ್ಥಿಕ ವ್ಯವಸ್ಥೆ ಕೃಷಿಯ ಮೇಲೆ ಅವಲಂಬಿತವಾಗಿದ್ದು, ಪ್ರಧಾನ ಮಂತ್ರಿಗಳ ದೂರದೃಷ್ಟಿಯ ಯೋಜನೆಯಿಂದ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಯಾಗುತ್ತಿದ್ದು, ಕೃಷಿಕರಿಗೆ ವರದಾನವಾಗಲಿದೆ ಎಂದು ಕೇಂದ್ರ ಕೃಷಿ, ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದ್ದಾರೆ.

ಅವರು ಇಂದು ನಗರದ ಫೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಅನ್ವೇಷಣ್ ಇನ್ನೋವೇಶನ್ಸ್ ಅಂಡ್ ಎಂಟ್ರೆಪ್ರೆಂಯೂರಿಯಾಲ್ ಪೋರಂ ವತಿಯಿಂದ ನಡೆದ ಮಲೆನಾಡ್ ಸ್ಟಾರ್ಟ್ ಅಪ್ ಸಮಿಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಸೇವೆಯನ್ನು ದೇವರ ಪೂಜೆ ಎಂದುಕೊಂಡಿದ್ದೇನೆ. ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್‌ನ್ನು ಮಂಡಿಸಿದ ಬಿ.ಎಸ್. ಯಡಿಯೂರಪ್ಪನವರು ನಮಗೆಲ್ಲ ಮಾರ್ಗದರ್ಶಕರು ಎಂದ ಅವರು, ದೇಶದಲ್ಲಿ ಭಾರತದ ಅರ್ಥ ವ್ಯವಸ್ಥೆಗೆ ಶೇ.90ರಷ್ಟು ಕೃಷಿಕರಿಂದ ಯೋಗದಾನವಿದೆ. ಈ ಬಾರಿ ಕೃಷಿ ಉತ್ಪಾದನೆಯ ಪ್ರಮಾಣ, 3.5ರಿಂದ ಶೇ.4ಕ್ಕೆ ಏರಿಕೆಯಾಗಿದೆ. ಉತ್ಪಾನೆಯಲ್ಲಿ ಹೆಚ್ಚಳ ಅತ್ಯಾಧುನಿಕ ಹೊಸ ಸಂಶೋಧನೆಗಳು ಉತ್ತಮ ಬೀಜಗಳ ಉತ್ಪಾದನೆ ಮತ್ತು ವಿತರಣೆ ಮಾಡಬೇಕು ಎಂದು ಕೇಂದ್ರ ಕೃಷಿ ಇಲಾಖೆ ದೃಢನಿಶ್ಚಯ ಮಾಡಿದೆ. 109 ಉತ್ತಮ ಬೀಜಗಳ ತಳಿಗಳನ್ನು ಕಂಡು ಹಿಡಿದಿದ್ದೇವೆ. ಕೃಷಿಯಲ್ಲಿ ತಾಂತ್ರಿಕ ಕ್ರಾಂತಿಯಾಗಬೇಕಾಗಿದೆ ಎಂದರು.

ಕೃಷಿ ಉತ್ಪಾದನೆಯ ವೆಚ್ಚವನ್ನು ಹೇಗೆ ಕಡಿಮೆ ಮಾಡಬೇಕು ಎಂಬುವುದರ ಬಗ್ಗೆ ಚಿಂತನೆ ನಡೆಸಲಾಗಿದೆ. ರಸಗೊಬ್ಬರಕ್ಕೆ ರೈತರಿಗೆ 2 ಲಕ್ಷ ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ನೀಡಿದ್ದೇವೆ. ಕರ್ನಾಟಕದಲ್ಲಿ ಬಿ.ಎಸ್.ವೈ. ಸರ್ಕಾರ ಇರುವಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ಮತ್ತು ರಾಜ್ಯದ 4 ಸಾವಿರ ಸೇರಿ ರೈತರಿಗೆ 10 ಸಾವಿರ ರೂ. ನೀಡುತ್ತಿತ್ತು. ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ. ರಾಜ್ಯಕ್ಕೆ ನೀಡಿದ ಕೋಟ್ಯಾಂತರ ರೂ.ಗಳ ಕೃಷಿ ಅನುದಾನವನ್ನು ಖರ್ಚು ಮಾಡದೇ ಉಳಿಸಿಕೊಂಡಿದೆ. ಈ ಬಗ್ಗೆ ನಾನು ಇಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.

ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ರೈತ
ಬೆಳೆದ ಜಗದಲ್ಲಿ ಕಡಿಮೆ ಬೆಲೆ ಸಿಗುವುದರಿಂದ ಬೇಡಿಕೆ ಇರುವ ದೂರದ ಊರಿಗೆ ಮಾರಾಟ ಮಾಡಲು ಸಾಗಾಣಿಕೆ ವ್ಯವಸ್ಥೆಗೆ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಲಿದ್ದು, ಇದರಿಂದ ರೈತನಿಗೆ ಹೆಚ್ಚಿನ ಬೆಲೆ ಸಿಗಲಿದೆ. ಗ್ರಾಹಕರಿಗು ದುಬಾರಿಯಾಗುವುದಿಲ್ಲ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ಟಾಟ್‌ಅಪ್ ಪ್ರಯೋಗದಿಂದ ಹೆಚ್ಚಿನ ಅನುದಾನ ಸ್ವಯಂಉದ್ಯೋಗಿಗಳಿಗೆ ಹರಿದು ಬರಲಿದೆ. ೯ನೇ ವರ್ಷಕ್ಕೆ ಸ್ಟಾಟ್‌ಅಪ್ ಯೋಜನೆ ಕಾಲೂರಿದ್ದು, ದೇಶದಲ್ಲಿ 1.60ಲಕ್ಷ ಹೊಸ ಸ್ಟಾಟ್‌ಅಪ್ ಕಂಪನಿಗಳು ಕಾರ್ಯಾಚರಿಸುತ್ತಿದೆ. ನಮ್ಮ ಶಿವಮೊಗ್ಗದ ಹಲವಾರು ಕಂಪನಿಗಳು ಉತ್ತಮ ಸಾಧನೆ ಮಾಡಿದೆ. ಕೃಷಿಕರಿಗೆ ಬೆನ್ನಲೆಬಾಗಿ ನಿಂತು ಸ್ವಯಂ ಉದ್ಯೋಗಿಗಳಾಗಲು ಎಫ್‌ಪಿಓ ಮುಖ್ಯ ಉದ್ದೇಶ ಹೊಂದಿದ್ದು, ರೈತರ ಲಾಭ ರೈತರೇ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇದಕ್ಕೂ ಮೊದಲು ಗಿಡ ನೆಟ್ಟು ಸ್ಟಾಟ್‌ಅಪ್ ಮಲೆನಾಡ್ ಸ್ಟಾರ್ಟ್ ಅಪ್ ಸಮಿಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಮಳಿಗೆಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದ ಪೂರ್‍ಯನಾಯ್ಕ್, ಡಾ. ಧನಂಜಯ ಸರ್ಜಿ, ಡಿ.ಎಸ್. ಅರುಣ್, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಟಿ.ಡಿ. ಮೇಘರಾಜ್, ಅನ್ವೇಷಣ್ ಪ್ರಮುಖರಾದ ಸುಭಾಶ್, ಸಿ.ಎಂ.ಪಾಟೀಲ್, ಭದ್ರೀಶ್, ನಾಗರಾಜ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ಟಾಟ್ ಅಪ್ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *