
ಶಿವಮೊಗ್ಗ : ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ದಿನಪತ್ರಿಕೆ, ಕರ್ನಾಟಕ ರಾಜ್ಯ ಪಾರಂಪರಿಕ ವೈದ್ಯ ಪರಿಷತ್, ಟಿಎಂಎಇಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದೊಂದಿಗೆ ಜ. 18ರಂದು ನಗರದ ಸರ್ಕಾರಿ ನೌಕರರ ಭವನ, ಆರ್‌ಟಿಓ ಆಫೀಸ್ ರಸ್ತೆ, ಶಿವಮೊಗ್ಗ ಇಲ್ಲಿ ಬೆಳಿಗ್ಗೆ 10ರಿಂದ ಸಂಜೆ 6.30 ರವರೆಗೆ ಉಚಿತ ಆರೋಗ್ಯ ತಪಾಸಕಾ ಶಿಬಿರ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹಿರಿಯ ವರದಿಗಾರ ರಾಮಚಂದ್ರ ಗುಣಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯರು, ಆಯುರ್ವೇದ ವೈದ್ಯರು, ಹೋಮಿಯೋಪತಿ ವೈದ್ಯರು ಹಾಗೂ ಯುನಾನಿ ವೈದ್ಯರು ತಪಾಸಣೆ ನಡೆಸಲಿದ್ದಾರೆ. ರಾಜ್ಯದ ಹಲವಾರು ಭಾಗಗಳಿಂದ 15ಕ್ಕೂ ಹೆಚ್ಚು ಪಾರಂಪರಿಕ ವೈದ್ಯರು ಆಗಮಿಸಲಿದ್ದಾರೆ.
ವೈದ್ಯರು ಮೂಳೆ, ಕೀಲು, ಚರ್ಮದ ವ್ಯಾದಿ, ಶುಗರ್, ಬಿಪಿ, ಕಿಡ್ನಿಯಲ್ಲಿ ಕಲ್ಲು, ಗ್ಯಾಂಗ್ರಿನ್, ಅಲ್ಲರ್, ಥೈರಾಯ್ಡ್ ಬೊಜ್ಜು, ಪ್ರಸೂತಿ ಹಾಗೂ ಸ್ತ್ರೀ ಸಂಬಂಧಿತ ಸಮಸ್ಯೆ ನರೋಳಿಗಳಿಗೆ ಹಾಗೂ ಇನ್ನಿತರೆ ರೋಗಗಳಿಗೆ ತಪಾಸಣೆ ನಡೆಸಿ ಔಷಧಿ ನೀಡಲಿದ್ದಾರೆ ಎಂದರು.
ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಿ.ಹೆಚ್.ಶಂಕರಮೂರ್ತಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಹಾಗೂ ಆಯುಷ್ ಇಲಾಖೆ ಅಧಿಕಾರಿಗಳು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಾಲ್ಕು ತರಹದ ಔಷಧಿ ಬಗ್ಗೆ ವೈದ್ಯರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಲಿದೆ. ವಿವಿಧ ರೋಗಗಳು ಹಾಗೂ ಅದನ್ನು ಗುಣಪಡಿಸುವ ಬಗ್ಗೆ ನುರಿತ ವೈದ್ಯರು ಮಾಹಿತಿ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವೈದ್ಯ ಪಂಡಿತ್ ನ ಅಧ್ಯಕ್ಷ ರಾಜು ಪಂಡಿತ್, ಡಾ. ಧಾತ್ರಿ ದತ್ತ, ಡಾ. ಅರ್ಪಿತಾ ಉಪಸ್ಥಿತರಿದ್ದರು.
