
ಶಿವಮೊಗ್ಗ :- ನಗರದ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್, ಗ್ರಾಹಕರ ಮನೆ ಬಾಗಿಲಿಗೇ ಸೇವೆ ನೀಡುವ ಉದ್ದೇಶದಿಂದ ಬರುವ ಹೊಸ ವರ್ಷ 2025 ರಲ್ಲಿ ಜಿಲ್ಲೆಯಲ್ಲಿ ಇನ್ನೂ 19ಹೊಸ ಶಾಖೆಗಳನ್ನು ಆರಂಭಿಸುವ ಗುರಿ ಹೊಂದಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಡಿಸಿಸಿ ಬ್ಯಾಂಕ್ ನ ನೂತನ 2025ರ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆಗೊಳಿಸಿ ಪತ್ರಿಕಾ ಗೋಷ್ಟಿ ಯಲ್ಲಿ ಮಾತನಾಡಿದ ಅವರು, ತಮ್ಮ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ 1200 ಕೋಟಿ ರೂ. ಕೃಷಿ ಬೆಳೆ ಸಾಲ ನೀಡುವ ಯೋಜನೆ ರೂಪಿಸಿದೆ. ಈಗಾಗಲೇ ಪ್ರಕಟಿಸಿದಂತೆ ಸೊರಬ ತಾಲೂಕಿನ ಜಡೆ, ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ, ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮಗಳಲ್ಲಿ ತನ್ನ ಮೂರು ಹೊಸ ಶಾಖೆಗಳನ್ನು ಆರಂಭಿಸಿಸಲಾಗಿದೆ. ,2025 ರಲ್ಲಿ 19 ಹೊಸ ಶಾಖೆಗಳನ್ನು ಆರಂಭಿಸಲು ರಿಸರ್ವ್ ಬ್ಯಾಂಕ್ ಗೆ ಅನುಮತಿ ಕೋರಲಾಗಿದೆ. ಇವು ಆರಂಬವಾದರೆ ಡಿಸಿಸಿ ಬ್ಯಾಂಕ್ ೫೦ ಶಾಖೆಗಳನ್ನು ಹೊಂದಿದಂತಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ತಾಲೂಕಿನಲ್ಲಿ ಕಾಚಿನಕಟ್ಟೆ, ಗಾಜನೂರು , ನವಲೆ, ಆಯನೂರು ಹಾಗೂ ಹೊಳಲೂರು, ಭದ್ರಾವತಿ ತಾಲೂಕಿನಲ್ಲಿ ಬಾರಂದೂರು ಹಾಗೂ ಆನವೇರಿ,ತೀರ್ಥಹಳ್ಳಿ ತಾಲೂಕಿನ ಬಿ.ಬಿ.ಮೇಗರವಳ್ಳಿ, ತೀರ್ಥಹಳ್ಳಿ ಎಪಿಎಂಸಿ ಯಾರ್ಡ್, ದೇವಂಗಿ, ಆರಗ ಹಾಗೂ ಕಟ್ಟೆ ಹಕ್ಕಲು, ಸಾಗರ ತಾಲೂಕಿನ ತ್ಯಾಗರ್ತಿ ಹಾಗೂ ಬ್ಯಾಕೊಡು, ಸೊರಬ ತಾಲೂಕಿನ ಕುಪ್ಪಗಡ್ಡೆ ಹಾಗೂ ಚಂದ್ರಗುತ್ತಿ, ಶಿಕಾರಿಪುರ ತಾಲೂಕಿನ ಹಿತ್ಲ ಹಾಗೂ ಹೊಸ ನಗರ ತಾಲೂಕಿನ ನಿಟ್ಟೂರು ಹಾಗೂ ನಗರದಲ್ಲಿ ಹೊಸ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂಬ ಮಾಹಿತಿ ನೀಡಿದರು.
2023-24ನೇ ಸಾಲಿನಲ್ಲಿ ಒಟ್ಟು 17.99 ಕೋಟಿ ಲಾಭ, ರೂ.ಲಾಭ ಗಳಿಸಿದ್ದು 10.28 ಕೋಟಿ ನಿವ್ವಳ ಲಾಭಹೊಂದಲಾಗಿದೆ. ಷೇರು ಬಂಡಾವಾಳ ೧೮೫ ಕೋಟಿ ಹಾಗೂ ರೂ. 67.47 ಕೋಟಿ ಹಾಗೂ ದುಡಿಯುವ ಬಂಡವಾಳ ರೂ. 2322. 29 ಕೋಟಿ ಆಗಿದೆ . ಬರುವ 2025ಕ್ಕೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವದಿ ಕೃಷಿ ಬೆಳೆ ಸಾಲ ಒಟ್ಟು ರೂ.1200 ಕೋಟಿ ಹಾಗೂ ಶೇ. 3 ರ ಬಡ್ಡಿ ದರದಲ್ಲಿ 1500 ರೈತರಿಗೆ ರೂ.80 ಕೋಟಿ ಮಧ್ಯಮಾವಧಿ ಕೃಷಿ ಸಾಲ ಹಂಚಿಕೆ ಮಾಡುವ ಯೋಜನೆಯನ್ನು ಹೊಂದಲಾಗಿದೆ ಎಂದರು.
ಶಿವಮೊಗ್ಗ ಉಪ ವಿಭಾಗದಲ್ಲಿ ಈಗಾಗಲೇ ಸಂಚಾರಿ ಶಾಖೆಯನ್ನು ಆರಂಭಿಸಲಾಗಿದ್ದು ಸಾಗರ ಉಪವಿಭಾಗದಲ್ಲೂ ಇದನ್ನು ಆರಂಭಿಸಲಾಗುವುದು ಎಂದ ಅವರುರಾಜ್ಯದ ಸಹಕಾರಿ ಬ್ಯಾಂಕುಗಳಲ್ಲೇ ೭ನೇ ವೇತನ ಆಯೋಗದ ಶಿಫಾರಸ್ಸನ್ನು ತಮ್ಮ ಬ್ಯಾಂಕಿನ ಉದ್ಯೋಗಿಗಳಿಗೆ ನೀಡಿದ ಹೆಗ್ಗಳಿಕೆ ತಮ್ಮದಾಗಿದೆ ಎಂದು ತಿಳಿಸಿದರು.
ಗೋಷ್ಟಿ ಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಕೆ.ಪಿ. ದುಗ್ಗಪ್ಪ ಗೌಡ, ಜಿ.ಎನ್.ಸುಧೀರ್, ಸಿ. ಹನುಮಂತಪ್ಪ, ಮಹಾಲಿಂಗಯ್ಯ ಶಾಸ್ತ್ರಿ, ಕೆ.ಪಿ.ರುದ್ರಗೌಡ, ದಶರಥಗಿರಿ, ಸಿಇಒ ಅನ್ನಪೂರ್ಣ, ಪ್ರಧಾನ ವ್ಯವಸ್ಥಾಪಕರಾದ ಸುಜತಾ, ಮತ್ತಿತರರಿದ್ದರು.