
ಶಿವಮೊಗ್ಗ :- ಹಿಂದೆ ಲಾರಿ ಬಸ್‌ಗಳಲ್ಲಿ ರೈತರು ಹೋರಾಟಕ್ಕೆ ಬರುತ್ತಿದ್ದರು. ಹಸಿರು ಶಾಲು ಶೋಕಿಗೆ ಹಾಕುವುದಲ್ಲ. ಇವತ್ತು ವಸೂಲಿಗೆ ರೈತ ಸಂಘದ ಟವೆಲ್ ಬಳಕೆ ಆಗುತ್ತಿದೆ. ಇವತ್ತಿನ ತಲೆಮಾರಿನ ಒಂದು ವರ್ಗ ಸ್ವಾರ್ಥಕ್ಕೆ ಬಳಕೆ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
ಇಂದು ಕರ್ನಾಟಕ ಸಂಘದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘದ ಸಂಸ್ಥಾಪಕರು ಹಾಗೂ ರೈತ ಕುಲದ ಕಲ್ಮಣಿಯಾಗಿದ್ದ ಎನ್.ಡಿಸುಂದರೇಶ್ ಅವರ ೩೨ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ರೈತ ಜಗೃತಿ ಸಭೆಯ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಸಂಘಟನೆಗಳು ಒಂದಾಗಬೇಕು. ವಿಚಾರದ ಮೇಲೆ ಒಂದಾಗಲು ಒಂದು ನಿಮಿಷ ಸಾಕು. ಹಲವಾರು ಸಮಸ್ಯೆ ರೈತರನ್ನು ಕಾಡುತ್ತಿದೆ. ಯಾವ ಕಿರೀಟ ಬಯಸದೇ ರೈತರಿಗೆ ದುಡಿಯುವ ಪಡೆ ತಯಾರು ಮಾಡಬೇಕಾಗಿದೆ. ಹೋರಾಟ ಮುಂದಿನ ತಲೆಮಾರಿಗೆ ವರ್ಗಾಯಿಸಬೇಕು ಎಂದರು.
ಯುವ ರೈತ ಮುಖಂಡ ಹಾಗೂ ಸುಂದರೇಶ್ ಪುತ್ರ ಎನ್.ಎಸ್.ಸುಧಾಂಶು ಮಾತನಾಡಿ, ಒಗ್ಗೂಡಿಸಿ ಹೋಗಬೇಕು. ಸ್ವಾರ್ಥಕ್ಕಾಗಿ ರೈತ ಸಂಘ ಮಾಡಬಾರದು. ನಾನು ಅದಾಗಬೇಕು, ಇದಾಗಬೇಕೆನ್ನುವುದು ಇರಬಾರದು. ಸಂಘ ರೈತರಿಗಾಗಿ ಹೋರಾಟ ಮಾಡಬೇಕು ಎಂದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ ಪ್ರಾಸ್ತಾವಿಕ ಮಾತನಾಡಿ, ಸರಣಿ ಉಪವಾಸ ಸತ್ಯಾಗ್ರಹಕ್ಕೆ ಸುಂದರೇಶ್ ಕರೆ ನೀಡಿದ್ದರು. ಜರ್ಜ್ ಫನಾಂಡೀಸ್ ಆಗಮಿಸಿದ್ದರು. ಆದರೆ ರಾಜಕಾರಣಿಗಳಿಗೆ ಅವಕಾಶ ಇಲ್ಲ ಎಂದು ವಾಪಸ್ ಕಳಿಸಿದ್ದರು. ನರಗುಂದ ಗೋಲಿಬಾರ್ ಬಳಿಕ ರೈತ ಸಂಘ ಸ್ಥಾಪನೆ ಮಾಡಿದರು. ಗುಂಡಿಟ್ಡು ಕೊಲ್ಲುವ ಸರ್ಕಾರಕ್ಕೆ ಮತ ಇಲ್ಲ ಎಂದು ಕರೆ ನೀಡಿದರು. ಜನತಾ ಪಕ್ಷ ಅಧಿಕಾರಕ್ಕೆ ಬಂತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆದರು ಎಂದರು.
ಮುಖಂಡ ರಾಮಣ್ಣ ಕೆಂಚಾಲೆ ಮಾತನಾಡಿ, ಹೋರಾಟಕ್ಕೆ ಯುವಕರ ಸಂಖ್ಯೆ ಕಡಿಮೆ ಆಗುತ್ತಿದೆ. ಅರವತ್ತು ದಾಟಿದವರೇ ಇದ್ದಾರೆ. ಹೋರಾಟ ಶಕ್ತಿ ಕಡಿಮೆ ಆಗುತ್ತಿದೆ. ಒಕ್ಕಲುತನ ಪರಿಸ್ಥಿತಿ ಬಗ್ಗೆ ಕಿಂಚಿತ್ ಚಿಂತೆ ಯುವಕರಿಗೆ ಇಲ್ಲ ಎಂದರು.
ಶೋಕಿಗೆ ಶಾಲು ಹಾಕಿಕೊಂಡು ಸಂಘಟನೆ, ಹೋರಾಟ ಮಾಡದೇ ಇದ್ದರೆ ಅನ್ಯಾಯ ಮಾಡಿದ ಹಾಗೆ. ಸಣ್ಣ ಪುಟ್ಟ ವೈಮನಸ್ಸು ಬದಿಗಿಟ್ಟು ಸಂಘಟಿತ ಹೋರಾಟ ಅಗತ್ಯ. ಜನ ಎಷ್ಟು ಇದ್ದಾರೆ ಮುಖ್ಯ ಅಲ್ಲ. ಧೈರ್ಯವಾಗಿ ಹೋರಾಟ ಮಾಡಬೇಕು ಎಂದರು.
ವೇದಿಕೆಯಲ್ಲಿ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ.ಗಂಗಾಧರ್, ಮಂಡ್ಯದ ನಾಗಣ್ಣ, ಜನಕಿ ರಾಮಣ್ಣ, ಕೆ.ಎಸ್.ಪುಟ್ಟಪ್ಪ, ಕೋಲಾರ್ ಮಂಜುನಾಥ, ಗೌರವಾಧ್ಯಕ್ಷ ವೀರಪ್ಪ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸೇವಾ ದಳದ ಪದಾಧಿಕಾರಿಗಳ ಹಾಗೂ ಬ್ಲಾಕ್ ಅಧ್ಯಕ್ಷರುಗಳ ಸಭೆ ಇಂದು ಜಿಲ್ಲಾ ಕಾಂಗ್ರೆಸ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಮಂಜುನಾಥ್ ಬಾಬು ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್, ಪ್ರಮುಖರಾದ ಜೀವಸುಬ್ರಹ್ಮಣಿ, ಆರ್.ಕೆ.ಉಮೇಶ್, ಭೂತೇಶ್, ಎಸ್.ಡಿ.ಶಿವಪ್ಪ, ಕೆ.ಪಿ.ಚಂದ್ರು ಇನ್ನಿತರರಿದ್ದರು.